ವಿಶ್ವದ ಅತ್ಯಂತ ಮೆಚ್ಚುಗೆಯ ನಾಯಕನಾಗಿ ಆಯ್ಕೆಯಾದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ನಾಯಕರಾಗಿ ಹೊರಹೊಮ್ಮಿದ್ದಾರೆ. ದಿ ಮಾರ್ನಿಂಗ್ ಕನ್ಸಲ್ಟ್ ಎನ್ನುವ ಪೊಲಿಟಿಕಲ್ ಇಂಟೆಲಿಜೆನ್ಸಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡ 70 ರಷ್ಟು ಓಟ್ ಗಳಿಸುವ ಮೂಲಕ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು KOO ಅಪ್ಲಿಕೇಶನ್ಗೆ ಮಾಹಿತಿ ನೀಡಿ, “ಪ್ರಧಾನಿ # ನರೇಂದ್ರ ಮೋದಿ ಜಿ ಅವರು ಹೆಚ್ಚು ಮೆಚ್ಚುಗೆ ಪಡೆದ ವಿಶ್ವ ನಾಯಕರಾಗಿ ಮುಂದುವರೆದಿದ್ದಾರೆ” ಎಂದು ಬರೆದಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬಿಡನ್ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ ಸ್ಟ್ರೇಲಿಯನ್ ಪಿಎಂ ಸ್ಕಾಟ್ ಮಾರಿಸನ್, ಕೆನಡಾ ಪಿಎಂ ಟ್ರುಡೊ, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ನಂತಹ ಘಟಾನುಗಟಿಗಳನ್ನ ಹಿಂದಿಕ್ಕಿ ಮೋದಿ ಮತ್ತೊಮ್ಮೆ ಜನಪ್ರಿಯ ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ.