PM National Apprenticeship : ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೇಂದ್ರ ಸರ್ಕಾರವು ಸೋಮವಾರದಂದು ದೇಶದ 25 ರಾಜ್ಯಗಳ 197 ಜಿಲ್ಲೆಗಳಲ್ಲಿ ‘ಅಪ್ರೆಂಟಿಸ್ಶಿಪ್ ಮೇಳ’ವನ್ನು ಏರ್ಪಡಿಸಿದೆ.
ಈ ಮೇಳದಲ್ಲಿ ಕರ್ನಾಟಕದ 8 ಜಿಲ್ಲೆಗಳೂ ಸೇರಿದ್ದು, ಎಂಟೂ ಜಿಲ್ಲೆಗಳಲ್ಲಿ ಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಳ್ಳಾರಿ, ಬೆಳಗಾವಿ, ಬೆಂಗಳೂರು ನಗರ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಗದಗ ಮತ್ತು ಕೋಲಾರ ಜಿಲ್ಲೆಯಲ್ಲಿ ಮೇಳ ನಡೆಯಲಿದೆ.
‘ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಮೇಳ’ವು ಸ್ಥಳೀಯ ಉದ್ಯಮಗಳು ಮತ್ತು ಕಂಪನಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳನ್ನು ಕಂಪನಿಗಳು ಆಯ್ಕೆ ಮಾಡಿಕೊಂಡು ನಿರ್ದಿಷ್ಟಅವಧಿಗೆ ತರಬೇತಿ ನೀಡಲಿವೆ. ಈ ಅನುಭವವು ಅಭ್ಯರ್ಥಿಗಳಿಗೆ ನೌಕರಿ ಪಡೆಯಲು ವೃತ್ತಿಜೀವನ ಆರಂಭಿಸಲು ನೆರವಾಗಲಿದೆ.
ಈ ತರಬೇತಿಯಲ್ಲಿ ಭಾಗಿಯಾದವರಿಗೆ ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿಯ ಮಾನ್ಯತೆ ಹೊಂದಿರುವ ಪ್ರಮಾಣ ಪತ್ರ ದೊರಕಲಿದೆ.
ಈ ಪ್ರಮಾಣಪತ್ರ ದಿಂದ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶದ ಸಿಗುವ ಸಾಧ್ಯತೆ ಹೆಚ್ಚಲಿದೆ. ಮೇಳ ಹಮ್ಮಿಕೊಂಡಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ ಈ ಮಾಹಿತಿಯನ್ನು ತಿಳಿಸಿದೆ
ಅರ್ಜಿ ಸಲ್ಲಿಕೆ ಆಸಕ್ತರು ಅಭ್ಯರ್ಥಿಗಳು ವೆಬ್ ತಾಣಕ್ಕೆ ಭೇಟಿ ನೀಡಿ ತಮ್ಮ ಹೆಸರು ನೋಂದಾಯಿಸಬೇಕು. ಹಾಗೂ ಈ ಅರ್ಜಿದಾರರಿಗೆ ಸಮೀಪದ ಯಾವ ಸ್ಥಳದಲ್ಲಿ ಮೇಳ ಆಯೋಜನೆಗೊಂಡಿದೆ ಎಂಬ ಮಾಹಿತಿಯೂ ಸಹ ದೊರಕಲಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ನ 3 ಪ್ರತಿ,
ಎಲ್ಲಾ ಅಂಕಪಟ್ಟಿ,
ದಾಖಲೆಗಳ ತಲಾ 3 ಪ್ರತಿ,
ಫೋಟೋ ಸಹಿತ ಗುರುತಿನ ಚೀಟಿ
ಆಧಾರ್,
ಡಿಎಲ್,
3 ಪಾಸ್ಪೋರ್ಟ್ ಅಳತೆಯ ಫೋಟೋ
ಸಹಿತ ಆಗಮಿಸಬೇಕು
ಈ ಮೇಳವು
ಬೆಳಗಾವಿ ಸರ್ಕಾರಿ ಐಟಿಐ ಕಾಲೇಜು, ಬೆಳಗಾವಿ
ಚಿಕ್ಕಮಗಳೂರು ಸರ್ಕಾರಿ ಐಟಿಐ ಕಾಲೇಜು, ಚಿಕ್ಕಮಗಳೂರು
ಬೀದರ್ ಸರ್ಕಾರಿ ಐಟಿಐ ಕಾಲೇಜು, ಹುಮನಾಬಾದ್
ಬೆಂಗಳೂರು ನಗರ ಸರ್ಕಾರಿ ಐಟಿಐ ಕಾಲೇಜು, ಹೊಸೂರು ರಸ್ತೆ
ಸರ್ಕಾರಿ ಐಟಿಐ ಕಾಲೇಜು, ಬೆಮೆಲ್ ನಗರ, ಕೆಜಿಎಫ್
ಕೋಲಾರ ಸರ್ಕಾರಿ ಐಟಿಐ ಕಾಲೇಜು, ದೇವಸಮುದ್ರ, ಮುಳಬಾಗಲು
ಚಾಮರಾಜನಗರ ಜೆಎಸ್ಎಸ್ ಐಟಿಐ, ಮರಿಯಾಲ
ಗದಗ ಸರ್ಕಾರಿ ಐಟಿಐ ಕಾಲೇಜು, ಗದಗ
ಬಳ್ಳಾರಿ ಸರ್ಕಾರಿ ಐಟಿಐ ಕಾಲೇಜು, ಬಳ್ಳಾರಿ
ಈ ಮೇಳಕ್ಕೆ
5ರಿಂದ 12ನೇ ತರಗತಿ ಪಾಸಾದ, ಕೌಶಲ್ಯಾಭಿವೃದ್ಧಿ ತರಬೇತಿ ಪ್ರಮಾಣ ಪತ್ರ ಹೊಂದಿರುವವರು,ITI, Diploma Graduates, Graduates ಅಪ್ರೆಂಟಿಸ್ಶಿಪ್ ಮೇಳದಲ್ಲಿ ಭಾಗಿಯಾಗಲು ಹಾಗೂ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ








