ಕೋವಿಡ್ ಪರಿಸ್ಥಿತಿ ಪರಾಮರ್ಶಿಸಲು ಇಂದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ
ಭಾರತದಲ್ಲಿನ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾಗವಹಿಸಲಿದ್ದಾರೆ. ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಕಾರ್ಯಕ್ರಮವನ್ನ ಪ್ರಸ್ತುತ ಪಡಿಸಲಿದ್ದಾರೆ.
ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಆತಂಕಕಾರಿ ಹೆಚ್ಚಳದ ನಡುವೆ ಸಭೆ ನಡೆಯುತ್ತಿದೆ. ಇಂದು ಬೆಳಿಗ್ಗೆ 24 ಗಂಟೆಗಳಲ್ಲಿ ಸುಮಾರು 3,000 ಪ್ರಕರಣಗಳು ಕಂಡುಬಂದಿವೆ, ಕಳೆದ ಮಂಗಳವಾರಕ್ಕೆ ಹೋಲಿಸಿದರೆ ಶೇಕಡಾ 17 ರಷ್ಟು ಹೆಚ್ಚಾಗಿದೆ.
ವ್ಯಾಕ್ಸಿನೇಷನ್ ಡ್ರೈವ್‌ನ ಸ್ಥಿತಿ, ಮುನ್ನೆಚ್ಚರಿಕೆ ಡೋಸ್ ಮತ್ತು ಮಕ್ಕಳ ಲಸಿಕೆ ಹಾಗೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರು ರಾಜ್ಯಗಳ ಕುರಿತು ಚರ್ಚೆ ಮಾಡುವ ಸಾಧ್ಯತೆ ಇದೆ.
2020 ರಲ್ಲಿ ಸಾಂಕ್ರಾಮಿಕ ರೋಗವು ದೇಶಕ್ಕೆ ಪ್ರವೇಶಿಸಿದಾಗಿನಿಂದ ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ,
ಭಾನುವಾರ, ರಾಷ್ಟ್ರವನ್ನುದ್ದೇಶಿಸಿ ಮಾಡಿದ ‘ಮನ್ ಕಿ ಬಾತ್’ ಭಾಷಣದಲ್ಲಿ ಪ್ರಧಾನಿ ಮಾತನಾಡಿ, ಜನರು ಜಾಗರೂಕರಾಗಿರಿ ಮತ್ತು ಕೋವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ವಿಶೇಷವಾಗಿ ಹಬ್ಬದ ದಿನಗಳಲ್ಲಿ ಅನುಸರಿಸುವಂತೆ ಒತ್ತಾಯಿಸಿದರು. ಸಾರ್ವಜನಿಕ ಅಥವಾ ಕಿಕ್ಕಿರಿದ ಸ್ಥಳಗಳಲ್ಲಿದ್ದಾಗ ಮಾಸ್ಕ್ ಧರಿಸಲು ಮತ್ತು ನಿಯಮಿತವಾಗಿ ತಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಜನರಿಗೆ ನೆನಪಿಸಿದರು.