ಒಂದೆಡೆ ಅಮೆರಿಕಾ ಅಧ್ಯಕ್ಷರ ಆಗಮನಕ್ಕೆ ಭವ್ಯ ಸ್ವಾಗತ ಕೋರಲು ಕೇಂದ್ರ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ. ಇತ್ತ, ಟ್ರಂಪ್ ಆಗಮನಕ್ಕೆ ಕಾಂಗ್ರೆಸ್ ಸೇರಿ ಹಲವು ವಿಪಕ್ಷಗಳು ತಮ್ಮ ಟೀಕಾಪ್ರಹಾರವನ್ನ ಮುಂದುವರೆಸಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಹೆಚ್-1ಬಿ ವೀಸಾ ಸರಳೀಕರಣಗೊಳಿಸುವುದು, ಜಿಎಸ್ ಪಿ ಪುನಃಸ್ಥಾಪನೆ ಮಾಡುವುದು ಹಾಗೂ ತಾಲಿಬಾನ್ ವಿಷಯದಲ್ಲಿ ಭದ್ರತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸುತ್ತಾರೆಯೇ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ಚÀ್ರಶ್ನೆ ಮಾಡಿದ್ದಾರೆ.
ಅಧ್ಯಕ್ಷ ಟ್ರಂಪ್ ಅಮೆರಿಕಾ ಫಸ್ಟ್ ಬಗ್ಗೆ ಮಾತನಾಡುತ್ತಿರುವಾಗ ಮೋದಿಯವರು ಇಂಡಿಯಾ ಫಸ್ಟ್ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಕೇಳಿದ್ದಾರೆ. ಟ್ರಂಪ್ ಸರ್ಕಾರದ ವಲಸೆ ನೀತಿಗಳ ನಿಬರ್ಂಧದಿಂದ ಹೆಚ್-1ಬಿ ವೀಸಾ ವಿಷಯದಲ್ಲಿ ಭಾರತೀಯರಿಗೆ ತೊಂದರೆಯಾಗಿದೆ ಈ ಬಗ್ಗೆ ಮೋದಿ ಯವರು ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಕುಟುಕಿದರು. ಇನ್ನು, ಇರಾನ್ ನಿಂದ ತೈಲ ಆಮದನ್ನು ನಿಲ್ಲಿಸಿದ ನಂತರ ಅಮೆರಿಕಾದಿಂದ ಅಗ್ಗದ ತೈಲವನ್ನು ಆಮದು ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಾರೆಯೇ ಹಾಗೂ ಅಮೆರಿಕದಿಂದ ರಕ್ಷಣಾ ಸಾಮಗ್ರಿಗಳ ಖರೀದಿಯಿಂದ ಭಾರತದ ಸ್ಟೀಲ್ ಸಾಮಗ್ರಿಗಳ ರಫ್ತಿಗೆ ಪ್ರೋತ್ಸಾಹ ಸಿಗುತ್ತದೆಯೇ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ರಂದೀಪ್ ಸುರ್ಜೆವಾಲಾ ಪುಂಕಾನುಪುಂಕವಾಗಿ ಪ್ರಶ್ನೆ ಮಾಡಿದ್ದಾರೆ.








