Demonetisation : ನೋಟು ರದ್ದತಿಯ ಮಹಾ ವೈಫಲ್ಯವನ್ನ ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ: ಖರ್ಗೆ
2016 ರಲ್ಲಿ ಪ್ರಧಾನಿ ಮೋದಿ ಜಾರಿಗೆ ತಂದ ನೋಟು ಅಮಾನ್ಯೀಕರಣದ ಕ್ರಮದ ಬಗ್ಗೆ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. “ಆರ್ಥಿಕತೆಯ ಪತನಕ್ಕೆ” ಕಾರಣವಾದ ಈ “ಮಹಾ ವೈಫಲ್ಯ” ವನ್ನು ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ ಎಂದು ಹೇಳಿದರು.
ನೋಟು ಅಮಾನ್ಯೀಕರಣದ ಆರನೇ ವರ್ಷಾಚರಣೆಗೆ ಒಂದು ದಿನ ಮುಂಚಿತವಾಗಿ ಖರ್ಗೆ ಈ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 21 ರ ಹೊತ್ತಿಗೆ ಸಾರ್ವಜನಿಕರ ಬಳಿಯಿರುವ ಕರೆನ್ಸಿ ಹೊಸ ಗರಿಷ್ಠ 30.88 ಲಕ್ಷ ಕೋಟಿ ರೂ.ಗೆ ಜಿಗಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನೋಟು ಅಮಾನ್ಯೀಕರಣದಿಂದ ದೇಶವನ್ನು ಕಪ್ಪುಹಣ ಮುಕ್ತಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದು ವ್ಯವಹಾರಗಳನ್ನು ನಾಶಪಡಿಸಿತು ಮತ್ತು ಉದ್ಯೋಗಗಳನ್ನು ಹಾಳುಮಾಡಿತು. ‘ಮಾಸ್ಟರ್‌ಸ್ಟ್ರೋಕ್’ ನಂತರ 6 ವರ್ಷಗಳ ನಂತರ ಸಾರ್ವಜನಿಕವಾಗಿ ಲಭ್ಯವಿರುವ ನಗದು 2016 ಕ್ಕಿಂತ 72% ಹೆಚ್ಚಾಗಿದೆ ಎಂದು ಖರ್ಗೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
“ಆರ್ಥಿಕ ಕುಸಿತಕ್ಕೆ ಕಾರಣವಾದ ಈ ಮಹಾ ವೈಫಲ್ಯವನ್ನು ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ಆರ್‌ಬಿಐ ಶುಕ್ರವಾರ ಬಿಡುಗಡೆ ಮಾಡಿದ ಹಣದ ಪೂರೈಕೆಯ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 21 ರ ಹೊತ್ತಿಗೆ ಸಾರ್ವಜನಿಕರ ಬಳಿಯಿರುವ ಕರೆನ್ಸಿ 30.88 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ನವೆಂಬರ್ 8, 2016 ರಂದು, 500 ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನ ಅಮಾನ್ಯೀಕರಣ ಮಾಡುವ ನಿರ್ಧಾರವನ್ನ ಪ್ರಧಾನಿ ಮೋದಿ ಘೋಷಿಸಿದ್ದರು.
PM yet to acknowledge ‘epic failure’ of demonetisation move: Kharge








