ಪ್ರೀತಿಸುವಂತೆ ಪಿಡಿಸಿದ ಯುವಕನ ಮೇಲೆ ಪೋಕ್ಸೊ ಪ್ರಕರಣ ದಾಖಲು
ಮಡಿಕೇರಿ: ಡ್ಯಾನ್ಸ್ ಕ್ಲಾಸ್ಗೆ ಬಂದ ಯುವತಿಯನ್ನು ಪ್ರೀತಿಸುಂತೆ ಯುವಕ ಪಿಡಿಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಯುವಕ ಯುವತಿಗೆ ಡಾನ್ಸ್ ಕಲಿಸುವುದಾಗಿ ಹೇಳಿದ್ದಾನೆ. ಇವನ ಮಾತಿನಿಂತೆ ಡಾನ್ಸ್ ಕಲಿಯಲು ಯುವತಿ ಡ್ಯಾನ್ಸ್ ಕಲಿಯಲು ಬಂದಿದ್ದಾಳೆ ಆಗ ಆಕೆಗೆ ಪ್ರೀತಿಸುವಂತೆ ಪಿಡಿಸಿದ್ದಾನೆ. ಸಧ್ಯ ಈತನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಯುವಕನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ವ್ಯಾಪ್ತಿಯಲ್ಲಿ ಇರುವ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದ. ಯುವತಿಯನ್ನು ಸೋಶಿಯಲಲ್ ಮೀಡಿಯಾ ಮೂಲಕ ಸಂರ್ಪಕಿಸಿದ್ದನು. ಯುವತಿಗೆ ಡ್ಯಾನ್ಸ್ ನಲ್ಲಿ ಆಸಕ್ತಿ ಇರುವುದು ತಿಳಿದುಬಂದಿದೆ. ಇದನ್ನೆ ಬಳಸಿಕೊಂಡ ಯುವಕ, ಯುವತಿಗೆ ನಿಮಗೆ ಡ್ಯಾನ್ಸ್ ಕಲಿಸುತ್ತೇನೆ ಅದಕ್ಕೆ ನೀವು ನಮ್ಮ ಕ್ಲಾಸ್ ಗೆ ಬರಬೇಕು ಎಂದು ಹೇಳಿದ್ದಾನೆ.
ಕಾಲೇಜು ಹೋಗುತ್ತಿದ್ದ ಯುವತಿ ಆತ ಹೇಳಿದ್ದನ್ನು ನಂಬಿ ಕಾಲೇಜ್ ಬಿಟ್ಟು ಡ್ಯಾನ್ಸ್ ಕಲಿಯಲು ಕ್ಲಾಸ್ಗೆ ಹೋಗಿದ್ದಾಳೆ. ಈ ವೇಳೆ ನೃತ್ಯ ಕಲಿಯುವ ಆಸಕ್ತಿಯಿಂದ ಬಂದ ಯುವತಿಯನ್ನು ನನ್ನನ್ನು ಪ್ರೀತಿಸಬೇಕು. ಪ್ರೀತಿಸಲು ಒಪ್ಪದಿದ್ದರೆ ನಿನ್ನನ್ನು ಕೊಲೆಮಾಡುವುದಾಗಿ ಯುವಕ ಬೆದರಿಕೆ ಹಾಕಿದ್ದಾನೆ.
ಈ ಹಿನ್ನೆಲೆ ಯುವತಿ ಪೋಷಕರಿಗೆ ಹೋಗಿ ನಡೆದಿದ್ದನು ತಿಳಿಸಿದ್ದಾಳೆ. ಪರಿಣಾಮ ಅವರು ಯುವಕನ ವಿರುದ್ಧ ದೂರು ನೀಡಿದ್ದಾರೆ. ಯುವತಿಯ ಪೋಷಕರು ದೂರು ನೀಡಿದ ಬೆನ್ನಲ್ಲೇ ವಿಚಾರಣೆ ನಡೆಸಿದ ಪೊಲೀಸರು ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.