ಆಕ್ಷನ್ ಪ್ರಿನ್ಸ್ ಧ್ರುವ ಅಭಿಮಾನಿಗಳಿಗೆ ನಿರಾಸೆ: ‘ಪೊಗರು’ ರಿಲೀಸ್ ಅಪಡೇಟ್..!
ಕ್ರಿಸ್ ಮಸ್ ಗೆ ಸ್ಯಾಂಡಲ್ ವುಡ್ ಬಹುನಿರೀಕ್ಷೆಯ ಹೈವೋಲ್ಟೇಜ್ ಪೊಗರು ಸಿನಿಮಾ ರಿಲೀಸ್ ಆಗುತ್ತೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಸಿನಿಮಾ ಡಿಸೆಂಬರ್ 25 ಕ್ಕೆ ರಿಲೀಸ್ ಆಗೋದು ಡೌಟು ಎನ್ನಲಾಗ್ತಿದೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿಕ್ಷೆಯ ಪೊಗರು ಸಿನಿಮಾ ರಿಲೀಸ್ ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪೊಗರು ಇನ್ನೇನು ಕ್ರಿಸ್ಮಸ್ ಗೆ ತೆರೆಗಪ್ಪಳಿಸುತ್ತೆ ಎಂದು ಕಾಯುತ್ತಿದ್ದ ಸಿನಿಪ್ರಿಯರಿಗೆ ಬೇಸರದ ಸುದ್ದಿ ಕೇಳಿಬರ್ತಿದೆ. ಕ್ರಿಸ್ ಗೆ ಅಥವ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಆಗಬಹುದು ಎಂದು ಇತ್ತೀಚೆಗೆ ಸಿನಿಮಾ ತಂಡ ಅಪಡೇಟ್ ನೀಡಿತ್ತು. ಹೀಗಾಗಿ ಬಹುತೇಕ ಕ್ರಿಸ್ ಮಸ್ ಸಿನಿಮಾ ರಿಲೀಸ್ ಆಗೋದು ಪಕ್ಕಾ ಎಂದೇ ಊಹಿಸಲಾಗಿತ್ತು. ಆದ್ರೆ ಕ್ರಿಸ್ ಮಸ್ ಗೆ ಸಿನಿಮಾ ರಿಲೀಸ್ ಆಗಲ್ಲ ಎನ್ನಲಾಗ್ತಿದೆ.
ಕೊರೊನಾ ಮಾರ್ಗಸೂಚಿಯಂತೆ ಕೇವಲ 50ರಷ್ಟು ಮಾತ್ರ ಥಿಯೇಟರ್ ಗಳಲ್ಲಿ ಪ್ರೇಕ್ಷಕರಿಗೆ ಸಿನಿಮಾ ನೋಡುವ ಅವಕಾಶ ನೀಡಲಾಗಿದೆ. ಹೀಗಾಗಿಯೇ 100ರಷ್ಟು ಅವಕಾಶ ನೀಡುವವರೆಗೂ ಸಿನಿಮಾ ಬಿಡುಗಡೆ ಮಾಡದೇ ಇರೋದಕ್ಕೆ ಮೇಕರ್ಸ್ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡದೇ ಇರೋದೆ ಸೇಫ್ ಎಂದು ನಿರ್ಮಾಪಕರು ಯೋಚಿಸಿದ್ದಾರೆ. ಸದ್ಯದಲ್ಲೇ ಪೊಗರು ಸಿನಿಮಾದ ರಿಲೀಸ್ ಡೇಟ್ ಬಹಿರಂಗ ಪಡಿಸಲು ಸಿನಿಮಾತಂಡ ನಿರ್ಧರಿಸಿದೆ. ಜನವರಿ ಯಾವ ದಿನಕ್ಕೆ ಪೊಗರು ಎಂಟ್ರಿ ಕೊಡುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ತಮಿಳು ವಿಜೆ ಚಿತ್ರಾ ಆತ್ಮಹತ್ಯೆ : ನಿರೂಪಕಿಯಾಗಿ , ನಟಿಯಾಗಿ , ಡ್ಯಾನ್ಸರ್ ಆಗಿ ಮನೆಮಾತಾಗಿದ್ದ ಚಿತು ಲೈಫ್ ಜರ್ನಿ..!
ಇನ್ನೂ ಹಾಗೊಂದುವೇಳೆ ಶೀಘ್ರವೇ 100 ರಷ್ಟು ಸೀಟಗಳ ಅವಕಾಶ ಸಿಕ್ರೆ ಜನವರಿ ವೇಳೆ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗ್ತಿದೆ. ಇನ್ನೂ ಹಲವು ಸ್ಟಾರ್ ನಟರ ಸಿನಿಮಾಗಳು ಶೂಟಿಂಗ್ ಮುಗಿಸಿ ರಿಲೀಸ್ ಹೊಸ್ತಿಲಿನಲ್ಲಿವೆ. ಈ ಲಿಸ್ಟ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3, ದುನಿಯಾ ವಿಜಯ್ ಅಭಿಯನದ ಸಲಗ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಹ ಇವೆ. ಥಿಯೇಟರ್ ಗಳು ಸಹಜ ಸ್ಥಿತಿಯತ್ತ ಮರಳಲು ಮೇಕರ್ಸ್ ಕಾಯಯುತ್ತಿದ್ದಾರೆ.
ಇನ್ನೂ ಪೊಗರು ಸಿನಿಮಾಗಾಗಿ ಕೇವಲ ಕನ್ನಡಾಭಿಮಾನಿಗಳು ಕಾಯುತ್ತಿಲ್ಲ. ಯಾಕಂದ್ರೆ ಈ ಸಿನಿಮಾ ಕನ್ನಡ ,ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಏಕಕಾಲಕ್ಕೆ ರಿಲೀಸ್ ಆಗಲಿದೆ. ಅದ್ರಲ್ಲೂ ಪೊಗರು ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ 7.2 ಕೋಟಿಗೆ ಮಾರಾಟವಾಗಿದೆ ಎನ್ನಲಾಗ್ತಿದೆ. ಹೀಗಾಗಿ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel