ರಷ್ಯಾ ವಿರೋಧ ಪಕ್ಷದ ರಾಜಕಾರಣಿ ಅಲೆಕ್ಸಿ ನವಾಲ್ನಿಗೆ ವಿಷ ಪ್ರಾಶನ – ಸಾಕ್ಷ್ಯಾಧಾರಗಳಿಂದ ಸಾಬೀತು
ಬರ್ಲಿನ್, ಸೆಪ್ಟೆಂಬರ್03: ರಷ್ಯಾದ ವಿರೋಧ ಪಕ್ಷದ ರಾಜಕಾರಣಿ ಅಲೆಕ್ಸಿ ನವಾಲ್ನಿಗೆ ವಿಷ ನೀಡಿ ಹತ್ಯೆಗೆ ಪ್ರಯತ್ನಿಸಲಾಗಿದೆ ಎಂಬುದಕ್ಕೆ ಪುರಾವೆ ದೊರಕಿದೆ ಎಂದು ಜರ್ಮನಿ ಹೇಳಿದೆ. ಕಳೆದ ತಿಂಗಳು ಸೈಬೀರಿಯಾಗೆ ವಿಮಾನದಲ್ಲಿ ತೆರಳುವಾಗ ನವಾಲ್ನಿ ಅನಾರೋಗ್ಯಕ್ಕೆ ಒಳಗಾಗಿದ್ದು ನಂತರ ಅವರನ್ನು ಬರ್ಲಿನ್‌ಗೆ ಕರೆತರಲಾಯಿತು ಮತ್ತು ಅವರು ಪ್ರಸ್ತುತ ಕೋಮಾದಲ್ಲಿದ್ದಾರೆ.
ರಷ್ಯಾದ ಮಾಜಿ ಗೂಡಚಾರರ ಮೇಲೆ 2018 ರ ದಾಳಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ಗುರುತಿಸಿದ ರೀತಿಯ ರಾಸಾಯನಿಕ ವಿಷ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಸೇವಿಸಿದ್ದರು ಎಂದು ಜರ್ಮನ್ ಸರ್ಕಾರ ಹೊಸ ಪರೀಕ್ಷಾ ಫಲಿತಾಂಶಗಳನ್ನು ಉಲ್ಲೇಖಿಸಿ ಬುಧವಾರ ಹೇಳಿದೆ.
ನವಾಲ್ನಿಗೆ ಚಿಕಿತ್ಸೆ ನೀಡುವ ಬರ್ಲಿನ್ ಆಸ್ಪತ್ರೆ ಅವರ ಸ್ಥಿತಿ ಸುಧಾರಿಸುತ್ತಿದ್ದರೂ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದು, ಚೇತರಿಕೆಗೆ ದೀರ್ಘ ಸಮಯವನ್ನು ನಿರೀಕ್ಷಿಸುತ್ತದೆ ಎಂದು ಹೇಳಿದೆ. ಅಷ್ಟೇ ಅಲ್ಲ ವಿಷದಿಂದ ದೀರ್ಘಕಾಲೀನ ಪರಿಣಾಮಗಳನ್ನು ತಳ್ಳಿಹಾಕುವಂತಿಲ್ಲ ಎಂದು ತಿಳಿಸಿದೆ.
ಆಸ್ಪತ್ರೆಯ ಕೋರಿಕೆಯ ಮೇರೆಗೆ ವಿಶೇಷ ಜರ್ಮನ್ ಮಿಲಿಟರಿ ಪ್ರಯೋಗಾಲಯದ ಪರೀಕ್ಷೆಯು ನೋವಿಚೋಕ್ ಗುಂಪಿನ ರಾಸಾಯನಿಕ ವಿಷ ಸೇವನೆ ಆಗಿರುವ ಪುರಾವೆಗಳನ್ನು ತೋರಿಸಿದೆ ಎಂದು ಸರ್ಕಾರ ಹೇಳಿದೆ.








