ಚಾಮರಾಜನಗರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದೆ. ನಾಳೆಯ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಆದರೆ, ಹಲವೆಡೆ ಜನರು ಬೆಟ್ಟಿಂಗ್ ಗೆ ಇಳಿದಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಮತ್ತು ರಾಜಾರೋಷವಾಗಿ ಬೆಟ್ಟಿಂಗ್ (betting) ನಡೆಯುತ್ತಿರುವ ಸಂಗತಿ ವರದಿಯಾಗುತ್ತಿದ್ದವು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪುರಸಭೆಯಲ್ಲಿ (Town Municipal Council) ಸದಸ್ಯನಾಗಿರುವ ಕಿರಣ್ (Kran) ಎನ್ನುವವರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಸ್ ನಿ ರಂಜನಕುಮಾರ್ ಗೆಲ್ಲುತ್ತಾರೆ ಎಂದು ಒಂದು ಕೋಟಿ ರೂ. ಬಾಜಿ ಕಟ್ಟಲು ಮುಂದಾಗಿದ್ದರು.
ಅಲ್ಲದೇ, ಅಸಕ್ತರಿಗೆ ಬಂದು ಸಂಪರ್ಕಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು ಆಹ್ವಾನಿಸಿದ್ದರು. ಆದರೆ, ಬೆಟ್ಟಿಂಗ್ ಕಟ್ಟಲು ಹೋಗುವವರಿಗಿಂತಲೂ ಮುಂಚೆ ಪೋಲಿಸರು ಶಾಕ್ ನೀಡಿದ್ದು, ಸದ್ಯ ಕಿರಣ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.








