ಚಾಮರಾಜನಗರ: ವಿವಾಹಿತ ಗೃಹಿಣಿಯೊಂದಿಗೆ ಅನೈತಿಕ ಸಂಬಂಧ ಬೆಳಸಿದ್ದ ಪೇದೆ ನಗದು ಮತ್ತು ಚಿನ್ನಾಭರಣದೊಂದಿಗೆ ಎಸ್ಕೇಪ್ ಆಗಿ ಇದೀಗ ಸಿಕ್ಕಿಬಿದ್ದಿರುವ ಘಟನೆ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನಿವಾಸಿ ಹರೀಶ್ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕೊಳ್ಳೇಗಾಲದ ಮಠದ ಬೀದಿಯ ನಿವಾಸಿ ನಾಗರಾಜಪ್ಪ ಎಂಬುವವರ ಪತ್ನಿಯೊಂದಿಗೆ ಈತ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಅಲ್ಲದೇ ತನ್ನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿ 50 ಗ್ರಾಂ ಚಿನ್ನ, ಹಾಗೂ ಸುಮಾರು ಐದು ಲಕ್ಷರೂಪಾಯಿ ನಗದು ಕೊಂಡೊಯ್ದಿದ್ದು ಅಲ್ಲದೇ ಪ್ರೇಯಿಸಿಯನ್ನು ಕರೆದೊಯ್ದಿದ್ದಾನೆ.
ಇತ್ತ ಪೇದೆ ವಿರುದ್ಧ ನಾಗರಾಜಪ್ಪ ಕೊಳ್ಳೇಗಾಲ ಪೊಲೀಸ್ ಠಾಣೆಗೆ ದೂರು ನೀಡಿದರೂ ಠಾಣೆಯಲ್ಲಿ ದೂರು ಸ್ವೀಕಾರ ಮಾಡಿಕೊಂಡಿಲ್ಲ ಎನ್ನಲಾಗುತ್ತಿದೆ. ಇದರಿಂದ ಬೇಸತ್ತ ನಾಗರಾಜಪ್ಪ ಈ ಸಂಬಂಧ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ದಕ್ಷಿಣ ವಲಯ ಪೊಲೀಸ್ ನಿರೀಕ್ಷಕರಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಾರೆ.

ಇಷ್ಟಾಗಿದ್ದೇ ತಡ ಪೇದೆ ವಿರುದ್ಧ ದೂರು ನೀಡಿದ ನಾಗರಾಜಪ್ಪ ಅವರಿಗೆ ಇದೀಗ ಜೀವ ಬೆಎದರಿಕೆ ಕರೆಗಳು ಬರುತ್ತಿವೆಯಂತೆ. ಸದ್ಯ ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಾಜಪ್ಪ ಮನವಿ ಮಾಡಿಕೊಂಡಿದ್ದಾರೆ.









