“ಇನ್ಮೆಲೆ ಶೂಟೌಟ್ ಮಾಡಿದ ಬಳಿಕ ಎಕ್ಸ್ ರೇ ಬೇಕೇ ಬೇಕು”
ಬೆಂಗಳೂರು : ಶೂಟೌಟ್ ಕಾರ್ಯಾಚರಣೆ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.. ಇತ್ತೀಚೆಗೆ ಗುಂಡೇಟು ಕೂಡ ವ್ಯವಹಾರವಾಗಿದೆ. ಶೂಟೌಟ್ ಮಾಡುವಾಗಲು ಹಣದ ವ್ಯವಹಾರ ನಡೆಯುತ್ತಿದೆ.. ಚರ್ಮಕ್ಕೆ ತಗುಲಿದರೆ ಒಂದು ರೇಟು , ಬುಲೇಟ್ ಸವರಿ ಹೋದರೆ ಒಂದು ರೇಟು ಎಂಬಂತಾಗಿದೆ.. ದುಡ್ಡು ಇಲ್ಲದಿದ್ದರೆ ಖಾಕಿ ಗುಂಡೇಟಿಗೆ ಮಾಂಸ ಕಿತ್ತು ಬರೋದು ಕನ್ಪರ್ಮ್ ಹೀಗೆಲ್ಲಾ ಆರೋಪಗಳು ಕೇಳಿ ಬರುತ್ತಿರೋ ಹಿನ್ನೆಲೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳೋದಕ್ಕೆ ಮುಂದಾಗಿದ್ದಾರೆ..
ಶೂಟೌಟ್ ನಲ್ಲಿ ಯೂ ದುಡ್ಡು ಮಾಡ್ತಿರೋ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನಲೆ ಈ ಕ್ರಮ ತೆಗೆದುಕೊಳ್ಲಲಾಗಿದೆ.. ಅಲ್ಲದೇ ಇನ್ಮುಂದೆ ಶೂಟೌಟ್ ಮಾಡಿದ್ರೆ ಎಕ್ಸ್ ರೇ ಕೊಡಬೇಕಾಗುತ್ತೆ. ಇನ್ಮೆಲೆ ಶೂಟೌಟ್ ಮಾಡಿದ ಬಳಿಕ ಎಕ್ಸ್ ರೇ ಬೇಕೇ ಬೇಕು. ಶೂಟೌಟ್ ಆದ ಕಾಲಿನ ಎಕ್ಸ್ ರೇಯನ್ನ ಹಿರಿಯ ಅಧಿಕಾರಿಗಳಿಗೆ ಕಳಿಸಲೇಬೇಕು. ಗುಂಡು ಬಿದ್ದ ಸ್ಥಳದ ಅನ್ವಯ ಗುಂಡು ನುಗ್ಗಿಸಿದವನು ಸಮಜಾಯಿಸಿ ನೀಡಬೇಕು ಎಂಬ ನಿರ್ಧಾರ ಮಾಡಿದ್ದಾರೆ. ಜೊತೆಗೆ ರೌಡಿಶೀಟರ್ ಗಳಿಂದ ತಿಂಗಳ ವಸೂಲಿ ಬಗ್ಗೆಯೂ ಹಿರಿಯ ಪೊಲೀಸ್ ಆಯುಕ್ತರು ಗರಂ ಆಗಿದ್ದಾರೆ.. ಅಲ್ಲದೇ ರೌಡಿ ಪರೇಡ್ ಮಾಡಿ ವಾರ್ನಿಂಗ್ ನೀಡಿದ್ದರೂ ಭೀಕರ ಹತ್ಯೆಯಾಗಿದ್ದ ಹಿನ್ನೆಲೆ ಅಲ್ಲಿನ ಪೊಲೀಸರ ಮೇಲೆ ಹಿರಿಯಾಧಿಕಾರಿಗಳು ಅನುಮಾನ ವ್ಯಕ್ತ ಪಡಿಸಿದ್ದಾರೆ.








