ಕೊರೊನಾ ವೈರಸ್ ವಿರುದ್ದ ಸಮರ ಸಾರಲಾಗಿದೆ. ಹಾಗಾಗಿ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈ ಮುಗಿದು ಮನೆಯಿಂದ ಹೊರ ಬರಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಸಹ ಸಾರ್ವಜನಿಕರು ಮನೆಯಿಂದ ಹೊರ ಬರುವುದು ನಿಲ್ಲಿಸುತ್ತಿಲ್ಲ. ಹೊರ ಬರದಂತೆ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಸಾದ ನೀಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಗಂಡಸರನ್ನು ಮನೆಯಿಂದ ಹೊರ ಕಳುಹಿಸದಂತೆ ಮಹಿಳೆರಲ್ಲಿ ವಿಭಿನ್ನವಾಗಿ ಕೇಳಿಕೊಂಡಿದ್ದಾರೆ.
ಹೌದು ಪಂಜಾಬ್ ನ ಪೊಲೀಸ್ ಅಧಿಕಾರಿ, ಕೊರೊನಾ ಭೀತಿಯಿಂದ ಲಾಕ್ ಡೌನ್ ಆಗಿದೆ. ಮನೆಯಿಂದ ಹೊರ ಬರದಂತೆ ಪ್ರಚಾರ ಮಾಡುತ್ತಿದ್ದರು. ಈ ವೇಳೆ “ಮಹಿಳೆಯರೇ ನಿಮ್ಮ ಮನೆಯಲ್ಲಿರುವ ಗಂಡಸರನ್ನು ಹೊರಗೆ ಕಳುಹಿಸಬೇಡಿ. ಅವರಿಗೆ ಮನೆಯಲ್ಲಿ ಕೆಲಸ ಮಾಡಲು ಹೇಳಿ, ಅವರಿಂದ ಕೆಲಸ” ಮಾಡಿಸಿ ಎಂದು ಮಹಿಳೆಯರಲ್ಲಿ ವಿನಂತಿ ಮಾಡಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಮನವಿ ಮಾಡಿದ ಪೊಲೀಸ್ ಅಧಿಕಾರಿ, ದೇಶದಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗಿದೆ. ಅದು ನಿಮಗೆ ತಿಳಿದೆ. ಈ ಬಗ್ಗೆ ಪಿ.ಎಂ ಸಹ ಮಾತನಾಡಿದ್ದಾರೆ. ಹಾಗಾಗಿ ಗಂಡಸರು ಏನಾದರೂ ಮನೆಯಲ್ಲಿ ಇರಲು ಆಗುವುದಿಲ್ಲ ಎಂದು ಹೇಳಿದರೆ, ಅವರಿಂದ ಮನೆ ಕೆಲಸ ಮಾಡಿಸಿ. ಮನೆಯನ್ನು ಸ್ವಚ್ಛಗೊಳಿಸಿ, ಪಾತ್ರೆ, ಬಟ್ಟೆ, ತೊಳೆಸಿ, ಅಡುಗೆ ಮಾಡುವುದು ಕಲಿಯುತ್ತಾರೆ. ಇದರಿಂದ ಮಹಿಳೆಯರು ಅಡುಗೆ ಮಾಡುವುದು ತಪ್ಪುತ್ತದೆ ಎಂದು ವಿಭಿನ್ನ ಐಡಿಯಾ ನೀಡಿದ್ದಾರೆ.








