ಅಗ್ನಿಪಥ್ ವಿರೋಧಿಸಿ ಬಂದ್ – ಬೆಳಗಾವಿಯಲ್ಲಿ ಪೊಲೀಸ್ ಸರ್ಪಗಾವಲು
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಬೆಳಗಾವಿ ಬಂದ್‍ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆ ಬೆಳಗಾವಿ ನಗರ ಹಾಗೂ ಜಿಲ್ಲಾ ಪೊಲೀಸರು ಬಿಗಿ ಭದ್ರತೆ ವಹಿಸಿದ್ದು, ರ‍್ಯಾಪಿಡ್ ಆಕ್ಷನ್ ಫೋರ್ಸ್ ಪಂಥ ಸಂಚಲನ ನಡೆಸಲಾಗಿದೆ.
ವಾಟ್ಸ್ಆ್ಯಪ್ ಮೂಲಕ ಬೆಳಗಾವಿ ಬಂದ್‍ಗೆ ಅನಾಮಧೇಯ ಸೇನಾ ಆಕಾಂಕ್ಷಿ ಯುವಕರ ಆಹ್ವಾನ ಹಿನ್ನೆಲೆ ಬೆಳಗಾವಿ ನಗರ,ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ. ಈಗಾಗಲೇ ಸಂದೇಶ ರವಾನೆ ಮಾಡಿದ್ದ ಯುವಕರನ್ನ ಕರೆಯಿಸಿ ಪೊಲೀಸರು ಖಡಕ್ ವಾರ್ನಿಂಗ್ ಮಾಡಿದ್ದಾರೆ. ಸೇನಾಕಾಂಕ್ಷಿಗಳು, ಕೋಚಿಂಗ್ ಸೆಂಟರ್ ಮುಖ್ಯಸ್ಥರಿಂದ ಬಂದ್ ಮಾಡದಂತೆ ವಿಡಿಯೋ ಹೇಳಿಕೆ ರಿಲೀಸ್ ಮಾಡಲಾಗಿದೆ.
ಬೆಳಗಾವಿ ನಗರ ಸಂಪರ್ಕ ಕಲ್ಪಿಸುವ ಮಾರ್ಗಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ, ಟೋಲ್ ಗಳಲ್ಲಿ ಬಿಗಿ ಬಂದೋಬಸ್ತ್ ಬಂದೋಬಸ್ತ್ ಮಾಡುವ ಮೂಲಕ ಬೆಳಗಾವಿ ಬರುವ ಯುವಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.








