ಕುಡಿದು ಮೃತಪಟ್ಟರೆ ವಿಮೆ ಹಣ ಕುಟುಂಬಕ್ಕೆ ಸಿಗುವುದಿಲ್ಲ : ಸುಪ್ರೀಂ ಕೋರ್ಟ್..!
ನವದೆಹಲಿ: ಕುಡುದು ಮೃತಪಟ್ಟರೇ ಅಂತವರ ಹೆಸರಿನ ವಿಮಾ ಹಣ ಯಾವುದೇ ಕಾರಣಕ್ಕು ಕುಟುಂಬದವರಿಗೆ ಸಿಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೌದು ಕುಡುಕರು ಎಷ್ಟೇ ವಿಮಾ ಹಣವನ್ನು ಕೂಡಿಟ್ಟರೂ, ಅವರು ಕುಡಿದು ಸಾವನಪ್ಪಿದರೆ, ಯಾವುದೇ ಕಾರಣಕ್ಕೂ ಅವರ ಕುಟುಂಬದವರಿಗೆ ವಿಮೆ ಹಣ ಸಂದಾಯವಾಗುವುದಿಲ್ಲ ಎಂದು ಆದೇಶ ಹೊರಡಿಸಿದೆ ಸುಪ್ರೀಂಕೋರ್ಟ್.
ಅತಿಯಾದ ಮದ್ಯ ಸೇವನೆಯಿಂದ ಉಸಿರುಗಟ್ಟಿ ಸತ್ತ ವ್ಯಕ್ತಿಯೊಬ್ಬನ ಕುಟುಂಬಸ್ಥರು ತಮಗೆ ವಿಮೆ ಹಣ ನೀಡಲು ವಿಮಾ ಸಂಸ್ಥೆಗೆ ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪನ್ನು ನೀಡಿದೆ.
ನ್ಯಾಯಮೂರ್ತಿಗಳಾದ ಎಂ. ಶಾಂತನಗೌಡರ್ ಮತ್ತು ವಿನೀತ್ ಸರನ್ ಅವರ ನ್ಯಾಯಪೀಠವು ರಾಜ್ಯ ಗ್ರಾಹಕ ವೇದಿಕೆ ಮತ್ತು ರಾಷ್ಟ್ರೀಯ ಗ್ರಾಹಕ ವೇದಿಕೆಯ ಏಕಕಾಲದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಿಮಾಚಲ ಪ್ರದೇಶದ ಕುಟುಂಬವೊಂದರ ಮನವಿಯನ್ನು ವಜಾ ಮಾಡಿದೆ.
ಹಿಮಾಚಲ ಪ್ರದೇಶದ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮೃತ ಚೌಕಿದಾರ್ ಓಂಪ್ರಕಾಶ್ ಅವರ ಕುಟುಂಬ ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಅಪಘಾತದಿಂದಾಗಿ ಸಾವನ್ನಪ್ಪಿದ್ದರೆ ಅಥವಾ ತೀವ್ರವಾಗಿ ಗಾಯಗೊಂಡಿದ್ದರೆ ಮಾತ್ರ ಆತನ ಕಾನೂನು ಉತ್ತರಾಧಿಕಾರಿ ವಿಮೆಗೆ ಜವಾಬ್ದಾರನಾಗಿರುತ್ತಾನೆ. ಮದ್ಯ ಸೇವನೆಯಿಂದಾಗಿ ಸತ್ತರೆ ಆ ಸಾವು ಆಕಸ್ಮಿಕವಲ್ಲ. ಹಾಗಾಗಿ ಸತ್ತವರ ಕುಟುಂಬಕ್ಕೆ ಯಾವುದೇ ವಿಮೆಯ ಹಣ ಸಂದಾಯವಾಗುವುದಿಲ್ಲ ಎಂದು ನ್ಯಾಯಾಲಯವು ತಿಳಿಸಿದೆ.
ಕೋವಿಡ್ ಲಸಿಕೆ ಪಡೆದ ಓವೈಸಿ : ಸಾರ್ವಜನಿಕರಿಗೆ ಲಸಿಕೆ ಪಡೆಯುವಂತೆ ಮನವಿ..!
45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲೇಬೇಕು : ಜಾವೇಡ್ಕರ್