ಬೈಡನ್ vs ಟ್ರಂಪ್ – ಯಾರಿಗೆ ಈ ಬಾರಿ ಶ್ವೇತ ಭವನದ ಅಧಿಪತ್ಯ US presidency
ವಾಷಿಂಗ್ಟನ್, ನವೆಂಬರ್04: ಕೊರೋನಾ ಸೋಂಕಿನ ನಡುವೆ ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕೆ ಮತದಾನ ನಡೆದಿದೆ. ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ನಡುವಿನ ಸ್ಪರ್ಧೆ ಭಾರಿ ಕುತೂಹಲ ಮೂಡಿಸಿದ್ದು, ಜಗತ್ತೇ ಅಮೆರಿಕ ಅಧ್ಯಕ್ಷರ ಚುನಾವಣಾ ಫಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಂತಿದೆ. US presidency
ಇಂದು ಫಲಿತಾಂಶ ಪ್ರಕಟವಾಗುತ್ತಿದ್ದು, ಸದ್ಯದ ಮಾಹಿತಿಯ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ಪೈಪೋಟಿ ನೀಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಅಧ್ಯಕ್ಷೀಯ ಚುನಾವಣೆಯ ಚರ್ಚೆಯು ಉಭಯ ಪಕ್ಷದ ನಾಯಕರು ಟೀಕೆ ವಾಕ್ಸಮರ, ಆರೋಪ ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿತ್ತು.
ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್, ಟ್ರಂಪ್ ಅವರನ್ನು ಜೋಕರ್, ಬಾಯಿ ಬಿಟ್ಟರೆ ಸುಳ್ಳು ಹೇಳುವ ವ್ಯಕ್ತಿ, ಕೊರೋನಾ ವೈರಸ್ ತಡೆಗಟ್ಟಬೇಕಾದರೆ ಮೊದಲು ಟ್ರಂಪ್ ಎಂಬ ವೈರಸ್ ಅನ್ನು ಸೋಲಿಸಬೇಕು ಎಂದು ಟೀಕಿಸಿದ್ದರೆ, ನಿದ್ದೆ ಗಣ್ಣಿನ ಜೋ ಬೈಡೆನ್ ಅಧ್ಯಕ್ಷನಾದರೆ ಈ ರಾಷ್ಟ್ರವನ್ನು ಶಟ್-ಡೌನ್ ಮಾಡುತ್ತಾನೆ. ದೇವರನ್ನು ವಿರೋಧಿಸುವ ಬೈಡನ್ ಅಧಿಕಾರಕ್ಕೆ ಬಂದರೆ ಚೀನಾ ಗೆದ್ದಂತೆ ಎಂದು ಟ್ರಂಪ್ ಟೀಕಿಸಿದ್ದರು.
ಕೇಂದ್ರ ಸರ್ಕಾರದಿಂದ 16 ರಾಜ್ಯಗಳು ಮತ್ತು 3 ಕೇಂದ್ರ ಪ್ರದೇಶಗಳಿಗೆ 6 ಸಾವಿರ ಕೋಟಿ ಜಿಎಸ್’ಟಿ ಪರಿಹಾರ ರವಾನೆ
ಈ ಬಾರಿ ವಲಸಿಗ ಭಾರತೀಯರು ಅಮೆರಿಕ ಚುನಾವಣೆಯಲ್ಲಿ ನಿರ್ಣಾಯಕ ಮತದಾರರಾಗಿರುವ ಕಾರಣ ಶ್ವೇತ ಭವನದ ಅಧ್ಯಕ್ಷೀಯ ಚುನಾವಣಾ ಚರ್ಚೆಯಲ್ಲಿ ಭಾರತದ ವಿಚಾರವೂ ಚರ್ಚೆಯಲ್ಲಿ ಸೇರಿತ್ತು.
ಭಾರತಕ್ಕಿಂತ ಚೀನಾಕ್ಕೆ ಅಪ್ತ ಎನ್ನುವ ಆರೋಪ ಹೊತ್ತಿರುವ ಬೈಡನ್ ತಾನು ಯಾವಾಗಲೂ ಭಾರತದ ಪರವಾಗಿ ನಿಲ್ಲುವುದಾಗಿ ಹೇಳಿದರೆ, ಭಾರತದ ಪ್ರಧಾನಿ ಮೋದಿ ತನ್ನ ಅಪ್ತ ಸ್ನೇಹಿತ ಎಂದು ಹೇಳುವ ಟ್ರಂಪ್ ಜಾಗತಿಕ ಮಾಲಿನ್ಯದಲ್ಲಿ ಭಾರತವನ್ನು ಟೀಕಿಸಿದ್ದರು.
ಎಚ್-1 ಬಿ ವೀಸಾ ಸೇರಿದಂತೆ ವಿವಿಧ ಉದ್ಯೋಗ ವೀಸಾ ವಿಚಾರದಲ್ಲಿ ನಿರ್ಬಂಧ ಹೇರಿ ಭಾರತೀಯರ ಕೋಪಕ್ಕೆ ಟ್ರಂಪ್ ಗುರಿಯಾಗಿದ್ದರೆ, ತಾನು ಅಧ್ಯಕ್ಷನಾದರೆ ಎಚ್-1ಬಿ ವೀಸಾ ಮೇಲಿನ ತಾತ್ಕಾಲಿಕ ರದ್ದತಿ ತೆಗೆದು ಹಾಕುವುದಾಗಿ ಬೈಡನ್ ಘೋಷಣೆ ಮಾಡಿದರು.
ಚೀನಾ ವಿರುದ್ಧ ತಾವು ಭಾರತದ ಪರ ನಿಲ್ಲುವುದಾಗಿ ಟ್ರಂಪ್ ಆಶ್ವಾಸನೆ ನೀಡಿದ್ದರೆ, ಭಾರತ ಮತ್ತು ಅಮೆರಿಕದಲ್ಲಿನ ಮಧ್ಯಮ ವರ್ಗದ ಬೆಳವಣಿಗೆಗೆ ಪೂರಕವಾಗುವಂತೆ ನೀತಿಗಳನ್ನು ಅನುಷ್ಠಾನಕ್ಕೆ ತರುವುದಾಗಿ ಬೈಡನ್ ಭರವಸೆ ನೀಡಿದರು.
ಸೂಪರ್ ಪವರ್ ಅಮೆರಿಕದ ಚುನಾವಣೆಯಲ್ಲಿ ಯಾವ ರಾಜ್ಯದಲ್ಲಿ ಅಭ್ಯರ್ಥಿಯೊಬ್ಬರಿಗೆ ಅತ್ಯಧಿಕ ಜನರ ನೇರ ಮತಗಳು ಸಿಗುತ್ತವೋ ಆ ವ್ಯಕ್ತಿಗೆ ಎಲೆಕ್ಟೋರಲ್ ಮತಗಳು ಹೋಗುತ್ತವೆ. ಅತಿ ಹೆಚ್ಚು ಎಲೆಕ್ಟೋರಲ್ ಮತಗಳನ್ನು ಪಡೆದವರು ಶ್ವೇತ ಭವನದ ಅಧ್ಯಕ್ಷ ಸ್ಥಾನವನ್ನು ಗೆಲ್ಲುತ್ತಾರೆ. ವರದಿಗಳ ಪ್ರಕಾರ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ಗೆ 131 ಮತ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರಿಗೆ 92 ಮತಗಳು ಲಭ್ಯವಾಗಿವೆ. ಅಮೆರಿಕ ಅಧ್ಯಕ್ಷ ಪಟ್ಟಕ್ಕೇರಬೇಕಾದರೆ 538 ಎಲೆಕ್ಟೋರ್ಗಳ ಪೈಕಿ 270 ಎಲೆಕ್ಟೋರ್ಗಳ ಬೆಂಬಲ ಬೇಕಾಗುತ್ತದೆ. ಕೆಲವೇ ಹೊತ್ತಿನಲ್ಲಿ ಚಿತ್ರಣ ಸ್ಪಷ್ಟವಾಗಲಿದ್ದು, ಈ ಬಾರಿ ಅಮೆರಿಕ ಚುನಾವಣೆಯು ಜಾಗತಿಕ ಭೂ ರಾಜಕೀಯದ ಮೇಲೂ ಅಪಾರ ಪರಿಣಾಮವನ್ನು ಬೀರಲಿದೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
has witnessed.