Ponniyin Selvan: ಕಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಸೃಷ್ಟಿಸಿದ ಚಿತ್ರ….
ಸ್ಟಾರ್ ಡೈರೆಕ್ಟರ್ ಮಣಿರತ್ನಂ ನಿರ್ದೇಶನದ ಚಿತ್ರ ಪೊನ್ನಿಯಿನ್ ಸೆಲ್ವನ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ಈ ಚಿತ್ರವನ್ನ ನಿರ್ಮಿಸಿದ್ದಾರೆ.
ಈ ಚಿತ್ರವನ್ನ ಕಲ್ಕಿ ಕೃಷ್ಣಮೂರ್ತಿ ಬರೆದಿರುವ ಪೊನ್ನಿಯಿನ್ ಸೆಲ್ವನ್ ಕಾದಂಬರಿಯನ್ನು ಆಧರಿಸಿದೆ. ಜಯಂ ರವಿ, ಐಶ್ವರ್ಯ ರೈ, ಚಿಯಾನ್ ವಿಕ್ರಮ್, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ, ವಿಕ್ರಮ್ ಪ್ರಭು, ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಪೊನ್ನಿಯಿನ್ ಸೆಲ್ವನ್’ ಬಿಡುಗಡೆಯಾದ ಮೊದಲ ವಾರದಲ್ಲಿ ವಿಶ್ವಾದ್ಯಂತ ರೂ.325 ಕೋಟಿಗೂ ಹೆಚ್ಚು ಗಳಿಸಿದೆ. ಈ ಮಟ್ಟದ ಕಲೆಕ್ಷನ್ ಗಳಿಸಿದ 6ನೇ ತಮಿಳು ಚಿತ್ರ ಎಂಬ ದಾಖಲೆ ಸೃಷ್ಟಿಸಿದೆ. ಈ ಹಿಂದೆ ‘2.0’, ‘ಎಂಥಿರನ್’, ‘ಕಬಾಲಿ’, ‘ಬಿಗಿಲ್’ ಮತ್ತು ‘ವಿಕ್ರಮ್’ ಈ ಸಾಧನೆ ಮಾಡಿತ್ತು. ವಾರಾಂತ್ಯದವರೆಗೆ ಕಲೆಕ್ಷನ್ 350 ಕೋಟಿ ದಾಟುವ ನಿರೀಕ್ಷೆಯಿದೆ.
‘ಕಬಾಲಿ’ ಮತ್ತು ‘ಎಂಥಿರನ್’ ಚಿತ್ರಗಳ ಕಲೆಕ್ಷನ್‌ಗಳನ್ನು ಈ ಸಿನಿಮಾ ಹಿಂದಿಕ್ಕಲಿದೆ ಎನ್ನುತ್ತವೆ ಟ್ರೇಡ್ ಮೂಲಗಳು. ‘ಪೊನ್ನಿಯಿನ್ ಸೆಲ್ವನ್’ ಮೊದಲ ದಿನವೇ ರೂ.80 ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿದೆ. ತಮಿಳುನಾಡಿನಲ್ಲಿ ಅತ್ಯಂತ ವೇಗವಾಗಿ ರೂ.100 ಕೋಟಿ ಕಲೆಕ್ಷನ್ ಮಾಡಿದ ಚಿತ್ರ ಎಂಬ ಸಂಚಲನ ಮೂಡಿಸಿದೆ.
ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಚೋಳರ ಕಾಲದ ಕಥೆಯನ್ನು ಆಧರಿಸಿದೆ. AR ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ ಜವಾಬ್ದಾರಿಯನ್ನು ನಿರ್ವಹಿಸಿದರು. ತೋಟ ತರಣಿ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲ ಭಾಗ ಬಿಡುಗಡೆಯಾದ 6 ರಿಂದ 9 ತಿಂಗಳ ನಂತರ ‘ಪೊನ್ನಿಯಿನ್ ಸೆಲ್ವನ್’ ಎರಡನೇ ಭಾಗ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
Ponniyin Selvan: The film created a stir at the Kollywood box office….