ಮುಂಗಾರು ಮಳೆ’ ನಟಿ ಪೂಜಾ ಗಾಂಧಿ (Pooja Gandhi) ಅವರು ತಮ್ಮ ಪತಿ ವಿಜಯ್ (Vijay) ಅವರೊಂದಿಗೆ ಲಂಡನ್ ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಬಸವೇಶ್ವರ ಪುತ್ಥಳಿಗೆ ಪೂಜಾ ಗಾಂಧಿ ದಂಪತಿ ನಮನ ಸಲ್ಲಿಸಿದ್ದಾರೆ. ಪೂಜಾ ಗಾಂಧಿ ಅವರು ಮದುವೆಯಾದ ನಂತರ ಪತಿಯೊಂದಿಗೆ ಲಂಡನ್ ಗೆ ಹಾರಿದ್ದಾರೆ. ಲಂಡನ್ನಲ್ಲಿರುವ 2 ಪ್ರಮುಖ ಕನ್ನಡ ಸಂಸ್ಥೆಗಳಾದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಬಸವ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ದಂಪತಿ ಭಾಗವಹಿಸಿತ್ತು.
ಈ ವೇಳೆ ಪೂಜಾ ಗಾಂಧಿ ಅವರು ಬಸವೇಶ್ವರ ಪುತ್ಥಳಿಗೆ ಗೌರವ ಸಲ್ಲಿಸಿದರು. 12ನೇ ಶತಮಾನದಲ್ಲಿ ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾತಿ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ಮಾತನಾಡಿದರು.