pooja hegde
ತೆಲುಗಿನ ‘ಶಕುಂತಲಾಂ’ ಸಿನಿಮಾಗೆ ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಅವರು ನಾಯಕಿಯಾಗಲಿದ್ದಾರೆ ಎಂಬ ಚರ್ಚೆಗಳು ಇತ್ತೀಚೆಗೆ ತಾರಕಕ್ಕೇರಿತ್ತು.
ಆದ್ರೆ ಇದೀಗ ಈ ಮಹಿಳಾ ಪ್ರಧಾನ ಬಹುನಿರೀಕ್ಷಿತ ಚಿತ್ರದಲ್ಲಿ ಅನುಷ್ಕಾ ಬದಲಿಗೆ ಮತ್ತೋರ್ವ ನಟಿಯ ಹೆಸರು ಕೇಳಿಬರುತ್ತಿದೆ.
ಹುಟ್ಟುಹಬ್ಬದ ದಿನ ‘ರಾಬಿನ್ ಹುಡ್’ ಸಿನಿಮಾ ಅನೌನ್ಸ್ ಮಾಡಿದ ಸಿಂಪಲ್ ಸುನಿ
‘ಶಕುಂತಲಂ’ನಲ್ಲಿ ನಟಿ ಪೂಜಾ ಹೆಗ್ಡೆ (pooja hegde) ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ಈಗಾಗಲೇ ಸಿನಿಮಾತಂಡ ಈ ಬಗ್ಗೆ ಪೂಜಾ ಹೆಗ್ಡೆ ಜೊತೆ ಮಾತುಕತೆ ಸಹ ನಡೆಸಿದೆ ಎನ್ನ ಹೇಳಲಾಗುತ್ತಿದೆ.
ಆದರೆ ಎಲ್ಲಿಯೂ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ.
ಗುಣಶೇಖರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ‘ಶಕುಂತಲಂ’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಮಾದರಿಯಲ್ಲಿ ಮೂಡಿಬರಲಿದೆ ಎನ್ನಲಾಗ್ತಿದೆ.
ಇನ್ನೂ ಈ ಸಿನೆಮಾಗೆ ಮಣಿ ಶರ್ಮಾ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಇನ್ನೂ ಇತ್ತೀಚಿಗೆ ಅನುಷ್ಕಾ ಅಭಿನಯದ ‘ನಿಶಬ್ದಂ’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇನ್ನೂ ಪೂಜಾ ಹೆಗ್ಡೆ ಸದ್ಯ ಟಾಲಿವುಡ್ ನ ರಾಧೆ ಶ್ಯಾಮ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಇದರ ಹೊರತಾಗಿ ಪೂಜಾ ಹೆಗ್ಡೆ ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








