Pooja Hegde : Radhe Shyam : ಪೂಜಾ ಹೆಗ್ಡೆಗೆ ಬಾಲಿವುಡ್ ನಲ್ಲಿ ಒಳ್ಳೆ ಆಫರ್ ಸಿಗುತ್ತಿಲ್ಲವಂತೆ..!!!
ಕನ್ನಡದ ಹುಡುಗಿ ಪೂಜಾ ಹೆಗ್ಡೆ ಟಾಲಿವುಡ್ , ಕಾಲಿವುಡ್ ನಲ್ಲಿ ಸ್ಟಾರ್ ನಟಿ… ಬಹುಬೇಡಿಕಯ ನಟಿ.. ಅತಿ ಹೆಚ್ಚು ಸಂಭಾವವನೆ ಪಡೆಯುವ ನಟಿಯರ ಪೈಕಿ ಒಬ್ಬರು.. ಆದ್ರೆ ಯಾಕೋ ಪೂಜಾಗೆ ಬಾಲಿವುಡ್ ನಲ್ಲಿ ಹಿಟ್ ನಟಿಯರ ಲಿಸ್ಟ್ ಸೇರುವ ಅದೃಷ್ಟವಿಲ್ಲ ಎನಿಸುತ್ತಿದೆ. ಪೂಜಾ ಹೆಗ್ಡೆ ಇತ್ತೀಚೆಗೆ ರಾಧೆ ಶ್ಯಾಮ್ ಪ್ರಚಾರದ ವೇಳೆ ಸಂದರ್ಶನದಲ್ಲಿ ನೀಡಿರುವ ಒಂದು ಹೇಳಿಕೆ ಅಚ್ಚರಿ ಮೂಡಿಸಿದೆ.. ಸಂದರ್ಶನದಲ್ಲಿ ತಮಗೆ ಬಾಲಿವುಡ್ ನಿಂದ ಯಾವುದೇ ಒಳ್ಳೆ ಆಫರ್ ಗಳು ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಪೂಜಾ ಹೆಗ್ಡೆ ‘ಒಕ ಲೈಲಾ ಕೋಸಂ’ ಸಿನಿಮಾ ಮೂಲಕ 2014ರಲ್ಲಿ ಟಾಲಿವುಡ್ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅದೇ ಟೈಮ್ ನಲ್ಲಿಯೇ ಬಾಲಿವುಡ್ ನಲ್ಲೂ ಪೂಜಾ ಹೆಗ್ಡೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.. 2016ರಲ್ಲಿ ತೆರೆಕಂಡಿದ್ದ ಹೃತಿಕ್ ರೋಷನ್ ಅಭಿನಯದ ಮೊಹೆಂಜೊದಾರೋ ಸಿನಿಮಾದಲ್ಲಿ ಪೂಜಾ ಕಾಣಿಸಿಕೊಂಡಿಇದ್ದರಾದರೂ ಮೊದಲ ಬಾಲಿವುಡ್ ಸಿನಿಮಾದಲ್ಲೇ ಪೂಜಾಗೆ ಸೋಲಾಗಿತ್ತು..
ಈ ಬಾಲಿವುಡ್ ಸಿನಿಮಾ ರಿಲೀಸ್ ಆಗುವುದದಕ್ಕೆ 2 ವರ್ಷ ಟೈಮ್ ತೆಗೆದುಕೊಂಡಿತ್ತು.. ಆದ್ರೆ ಆ ಅಂತರದಲ್ಲಿ ಅವರನ್ನ ಅನೇಕ ಬಾಲಿವುಡ್ ಸಿನಿಮಾಗಳ ಆಫರ್ ಗಳು ಹುಡುಕಿಕೊಂಡು ಬಂದಿದ್ದರೂ ಈ ಸಿನಿಮಾಗಾಗಿ ಅವೆಲ್ಲವನ್ನ ಪೂಜಾ ತಿರಸ್ಕರಿಸಿದ್ದರಂತೆ. ಆದ್ರೆ ಮೆಹಂಜುದಾರೋ ಫ್ಲಾಫ್ ಆಗಿ ಪೂಜಾ ಬಾಲಿವುಡ್ ಕನಸು ತಾತ್ಕಾಲಿಕವಾಗಿ ಕಮರಿ ಹೋಗಿತ್ತು.. ಇದೇ ಬಗ್ಗೆ ಮಾತನಾಡಿರೋ ಪೂಜಾ ದಕ್ಷಿಣ ಭಾರತದ ಸಿನಿಮಾ ನನ್ನನ್ನು ಒಪ್ಪಿಕೊಂಡಿದೆ. ಪ್ರೀತಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದೆ-ಮುಂದೆ ಯೋಚನೆ ಮಾಡದೆ ಹಿಂದಿ ಸಿನಿಮಾ ಪ್ರಾಜೆಕ್ಟ್ಗಳನ್ನ ತಿರಸ್ಕರಿಸುವ ಶಕ್ತಿ ಕೊಟ್ಟಿದೆ.
ಎರಡು ವರ್ಷ ನಾನು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಇದು ನನಗೆ ಓಕೆ ಅಂತ ಅನಿಸಿದೆ. ನನ್ನನ್ನು ಜನರು ಅಲಾ ವೈಕುಂಠಪುರಮುಲೊ ಸಿನಿಮಾದಿಂದ ಗುರುತಿಸುತ್ತಾರೆ. ನಾನು ಎಲ್ಲೇ ಹೋದರೂ ಈ ಸಿನಿಮಾ ಬಗ್ಗೆನೇ ಮಾತಾಡುತ್ತಾರೆಎ ಎನ್ನುವ ಮೂಲಕ ಸೌತ್ ಸಿನಿಮಾರಂಗವೇ ಮುಖ್ಯ ಎಂದು ಹೇಳಿಕೊಂಡಿದ್ದಾರೆ.. ಆದ್ರೀಗ ಮತ್ತೆ ಪೂಜಾ ಹಿಂದಿ ಸಿನಿಮಾಗಳನ್ನ ಒಪ್ಪಿಕೊಳ್ಳಲು ಶುರು ಮಾಡಿದ್ದು , ಇಷ್ಟು ದಿನ ನನಗೆ ಬಾಲಿವುಡ್ ನಲ್ಲಿ ಯಾವುದೇ ಒಳ್ಳೆ ಸಿನಿಮಾದ ಆಫರ್ ಸಿಕ್ಕಿರಲಿಲ್ಲ ಅದಕ್ಕೆ ನಟಿಸಿರಲಿಲ್ಲ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ ನನಗೆ ಯಾರಾದರೂ ಆಲಿಯಾ ಭಟ್ ನಟಿಸಿದ ರಾಜಿ ಸಿನಿಮಾಗೆ ಆಫರ್ ಕೊಟ್ಟಿದ್ದರೆ, ನಾನು ಹಿಂದೆ ಮುಂದೆ ನೋಡದೆ ಆ ಸಿನಿಮಾವನ್ನು ಒಪ್ಪಿಕೊಳ್ಳುತ್ತಿದ್ದೆ. ದಕ್ಷಿಣ ಭಾರತದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಲ್ಲಿನ ಸಿನಿಮಾ ಮಂದಿ ವಿಭಿನ್ನವಾಗಿ ಆಲೋಚನೆ ಮಾಡುತ್ತಿದ್ದಾರೆ. ಅವರ ಪ್ರೇಕ್ಷಕರಿಗೆ ಏನು ಬೇಕು ಅನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ನಟರಿಗೂ ಏನು ಕೊಡಬೇಕು ಎಂಬುದು ಗೊತ್ತಿದೆ ಎಂದು ಬಾಲಿವುಡ್ ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯ ನಡುವಿನ ವ್ಯತ್ಯಾಸದ ಬಗ್ಗೆ ತಮ್ಮ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ.
ನನಗೆ ದಕ್ಷಿಣ ಭಾರತದಲ್ಲಿ ಅದ್ಭುತ ಹಾಗೂ ಉತ್ತಮ ಸಿನಿಮಾಗಳು ಸಿಗುತ್ತಿವೆ. ಹೀಗಾಗಿ ನಾನು ಹಿಂದಿ ಸಿನಿಮಾಗಳನ್ನ ಧೈರ್ಯವಾಗಿಯೇ ತಿರಸ್ಕರಿಸುತ್ತಿದ್ದೀನಿ.. ತೆಲುಗು ಚಿತ್ರರಂಗ ನನ್ನನ್ನು ಒಪ್ಪಿಕೊಂಡಿದೆ. ನನ್ನ ಅಭಿಮಾನಿಗಳು ತುಂಬಾನೇ ಪೊಸೆಸಿವ್ ಆಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಪೂಜಾ ಹೆಗ್ಡೆ ಪ್ರಭಾಸ್ ನಟನೆಯ ಬಹುನಿರೀಕ್ಷಿತ ರಾಧೆ ಶ್ಯಾಮ್ ರಿಲೀಸ್ ಆಗಬೇಕಿದೆ.. ಟಿ-ಸಿರೀಸ್ ಸಂಸ್ಥೆ ನಿರ್ಮಾಣ ಮಾಡಿರುವ ಈ ಬಿಗ್ ಬಜೆಟ್ ಸಿನಿಮಾ ಹೀಗಾಗಿ ಮಾರ್ಚ್ 111 ಕ್ಕೆ ವಿಶ್ವಾದ್ಯಂತ ಐದು ಭಾಷೆಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಲಿದೆ. ಅಂದ್ಹಾಗೆ ಸಿನಿಮಾವನ್ನ ಹಿಂದಿ ತೆಲುಗಿನಲ್ಲಿ ಎರಡೂ ಭಾಷೆಗಳಲ್ಲೂ ಪ್ರತ್ಯೇಕವಾಗಿ ಶೂಟ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಎರಡೂ ಭಾಷೆಗಳಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ.