ಮಂಗಳೂರಿನ ಮಾವಿನ ಹಣ್ಣುಗಳನ್ನು ಟಾಲಿವುಡ್ ಗೆ ಪಾರ್ಸಲ್ ಮಾಡಿದ ಕನ್ನಡತಿ ಪೂಜಾ ಹೆಗ್ಡೆ
ಸೌತ್ ಸಿನಿಮಾ ಇಂಡಸ್ಟ್ರಿ ಯಲ್ಲಿ ಪ್ರಸ್ತುತ ಟಾಪ್ ನಟಿ ಆಗಿ ಮಿಂಚುತ್ತಿರುವ ಕನ್ನಡದ ಚೆಲುವೆ ಪೂಜಾ ಹೆಗ್ಡೆ ಇತ್ತೀಚೆಗಷ್ಟೇ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.. ಮಂಗಳೂರಿನವರಾಗಿರುವ ಪೂಜಾ ಹೆಗ್ಡೆ ತಮ್ಮ ಮಾವಿನ ತೋಟದಲ್ಲಿ ಬೆಳೆದಿದ್ದ ರಸವತ್ತಾದ ಮಾವಿನ ಹಣ್ಣುಗಳನ್ನ ಟಾಲಿವುಡ್ ನ ಮಂದಿಗೆ ಗಿಫ್ಟ್ ಪ್ಯಾಕ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಮಾವಿನ ಹಣ್ಣಗಳನ್ನು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಆವರಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಈ ಮೂಲಕ ಪೂಜಾಗೆ ಮತ್ತಷ್ಟು ಹೈಪ್ ತಂದುಕೊಟ್ಟ ‘ಅಲಾ ವೈಕುಂಠಪುರಂಲೋ’ ಮೂಲಕ ದೊಡ್ಡ ಮಟ್ಟದ ಸಕ್ಸಸ್ ನೀಡಿರುವ ನಿರ್ದೇಶಕರಿಗೆ ಮೊದಲು ಮಾವಿನ ಹಣ್ಣನ್ನು ತಲುಪಿಸಿ ಪರೋಕ್ಷವಾಗಿ ಥ್ಯಾಂಕ್ಸ್ ಹೇಳಿದ್ದಾರೆ.
ಅಲ್ಲದೇ ಟಾಲಿವುಡ್ ನ ಅನೇಕ ನಿರ್ದೇಶಕ ಮತ್ತು ನಿರ್ಮಾಪಕರಿಗೂ ಮಾವಿನ ಹಣ್ಣುಗಳನ್ನ ತಲುಪಿಸಿದ್ದಾರೆ ಎನ್ನಲಾಗಿದೆ.. ಸದ್ಯ ಇತ್ತೀಚೆಗೆ ಕೋವಿಡ್ ವಿಚಾರದಿಂದ ಸುದ್ದಿಯಲ್ಲಿದ್ದ ಪೂಜಾ ಹೆಗ್ಡೆ ಈಗ ಮಾವಿನ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.
ಇನ್ನೂ ಪೂಜಾ ಹೆಗ್ಡೆ ಸಿನಿಮಾ ವಿಚಾರಕ್ಕೆ ಬಂದ್ರೆ ಬಾಹುಬಲಿ ಪ್ರಭಾಸ್ ಜೊತೆಗಿನ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾದಲ್ಲಿ ಪೂಜಾ ಪ್ರಭಾಸ್ ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸಿನಿಮಾ ಜುಲೈ ಅಂತ್ಯಕ್ಕೆ ರಿಲೀಸ್ ಆಗಬೇಕಿತ್ತು.. ಆದ್ರೆ ಕೊರೊನಾ ಎಲ್ಲಾ ಪ್ಲಾನ್ ಫೇಲ್ ಮಾಡಿದೆ.. ಇನ್ನೂ ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ 65ನೇ ಚಿತ್ರದಲ್ಲಿಯೂ ಪೂಜಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.







