ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ನಟಿ ಪೂಜಾ ರಮೇಶ್ ಗೆ ಡಾಕ್ಟರೇಟ್ ಗೌರವ..!
ಇತ್ತೀಚೆಗಷ್ಟೇ ಮಿಸ್ ಇಂಡಿಯಾ 2021 ರ ಕಿರೀಟ ಮುಡಿಗೇರಿಸಿಕೊಂಡ ಕನ್ನಡದ ನಟಿ ಪೂಜಾ ರಮೇಶ್ ಅವರು ಸಾಧನೆಯ ಹಾದಿಯಲ್ಲಿ ಒಂದೊಂದೇ ಹೆಜ್ಜೆಯ ಮೆಟ್ಟಿಲೇರುತ್ತಿದ್ದಾರೆ.. ಚಂದನವನ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವ ನಟಿ ಪೂಜಾ ರಮೇಶ್ ಅವರು, ಕಳೆದ ವಾರವಷ್ಟೇ ಇನ್ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಸಂಸ್ಥೆ ಆಯೋಜನೆ ಮಾಡಿದ್ದ. ಫ್ಯಾಶನ್ ಶೋನಲ್ಲಿ ಮಿಸ್ ಇಂಡಿಯಾ 2021 ಟೈಟಲ್ ವಿನ್ನರ್ ಆಗಿ ಗೆದ್ದು ಸಕ್ಕತ್ ಸೌಂಡ್ ಮಾಡಿದರು .
ಈಗ ASIA VEDIC CULTURE ACADEMY ( Vedic culture – Research University) ಸಂಸ್ಥೆಯವರ ಕಡೆಯಿಂದ ಡಾಕ್ಟರೇಟ್ ಅವಾರ್ಡ್ ಪಡೆದು ಸಂಭ್ರಮಿಸಿದ್ದಾರೆ.. ಅಂದಹಾಗೆ ಪೂಜಾ ರಮೇಶ್ ಅವರು ತಮ್ಮ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಈಗ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ನಟಿ ಪೂಜಾ ರಮೇಶ್ ಅವರ ಈ ಬೆಳವಣಿಗೆಗೆ ಕಾರಣ ಇವರ ಪ್ರತಿಭೆ , ಶ್ರಮ , ತಂದೆ-ತಾಯಿ ಹಾಗೂ ಹಿರಿಯ ಕಲಾವಿದರ ಆಶೀರ್ವಾದವೇ.
ಕೋವಿಡ್ ಟೈಮ್ ನಲ್ಲಿ ಹಲವು ಹಿರಿಯ ಕಲಾವಿದರ ಮನೆ ಬಾಗಿಲಿಗೆ ಹೋಗಿ ಯೋಗಕ್ಷೇಮ ವಿಚಾರಿಸಿ ಅಹಾರ ಕಿಟ್ ನೀಡಿ ಆರ್ಶಿವಾದ ಪಡೆದುಕೊಂಡಿದ್ದಾರೆ. ಇವರ ಈ ಗುಣಕ್ಕೆ ಹಾಗೂ ಮಾಡುತ್ತಿರುವ ಸಹಾಯವನ್ನು ನೋಡಿ ಇತ್ತೀಚೆಗೆ ರಾಜ್ಯದ ಸಾಧಕರ ಸಾಧನೆ ಪಟ್ಟಿಯಲ್ಲಿ ಮಹಿಳಾ ಸಾಧಕಿ ಪ್ರಶಸ್ತಿ ಕೂಡ ಇವರಿಗೆ ದೊರಕಿದೆ.
ಅಪರೂಪಕ್ಕೆ ಬೇರೆ ಸ್ಟಾರ್ ನಟಿಯ ಅಂದ ಹೊಗಳಿದ ಕಂಗನಾ..!
ಇಷ್ಟೆಲ್ಲಾ ಸಾಧನೆ ಮಾಡಿರುವ ಪೂಜಾ ರಮೇಶ್ ಅವರು ಹಲವು ಸಿನಿಮಾ ಗಳಲ್ಲೂ ಕೂಡ ಅಭಿನಯಿಸುತ್ತಿದ್ದಾರೆ. ಪೂಜಾ ರಮೇಶ್, 2009ರಲ್ಲಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟರು. ಪೇಪರ್ ದೋಣಿ, ಲಹರಿ, ತಾಂಡವ ಮಹಾಕಾಳಿಯಲ್ಲಿ ಚಿತ್ರಗಳಲ್ಲಿ ಅಭಿನಯಿಸಿದ್ದ ಪೂಜಾ ರಮೇಶ್, 2015ರಿಂದ ಚಿತ್ರರಂಗದಿಂದ ದೂರವಿದ್ದರು. ಈಗ ಪಿಟ್ ಅಂಡ್ ಫೈನ್ ಆಗಿ ಮತ್ತೆ ಕಿರುತೆರೆ ಹಾಗೂ ಹಿರಿತೆರೆಯತ್ತ ಮುಖ ಮಾಡಿದ್ದಾರೆ. ಇವರ ಈ ಸಾಧನೆ ಯಶಸ್ಸು ಹೀಗೆ ಮುಂದೆ ದೊಡ್ಡ ಮಟ್ಟಕ್ಕೆ ಬೆಳೆಯಲಿ ಪೂಜಾ ರಮೇಶ್ ಅವರು ಇನ್ನಷ್ಟು ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಿ ಬೆಳೆಯಲಿ ಎಂಬುದು ನಮ್ಮ ಕನ್ನಡಿಗರ ಆಶಯ.








