ದಿನಕ್ಕೊಂದು ವಿಚಾರವಾಗಿ ಸುದ್ದಿಯಲ್ಲೇ ಇರುವ ಕಾಂಟ್ರವರ್ಸಿ ಕ್ವೀನ್ ಪೂನಂ ಪಾಂಡೆ ಇತ್ತೀಚೆಗಷ್ಟೇ ಮದವೆಯಾಗಿದ್ರು. ಆದ್ರೆ ಮದುವೆಯಾದ ಒಂದೇ ವಾರಕ್ಕೆ ಪತಿಯನ್ನ ಜೈಲಿಗಟ್ಟಿದ್ದರು. ಸ್ಯಾಮ್ ಬಾಂಬೆ ತಮಗೆ ದೈಕಹಿಕ ಕಿರುಕುಳ ನೀಡಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ಜೈಲಿಗೇ ಹೋದ ಒಂದೇ ದಿನಕ್ಕೆ ಸ್ಯಾಮ್ ಬಾಂಬೆಗೆ ಜಾಮೀನು ಸಿಕ್ಕಿತ್ತು.
ಮೂರು ದಿನಗಳ ಹಿಂದಷ್ಟೇ ಕಿತ್ತಾಡಿಕೊಂಡು ರಂಪ ಮಾಡಿದ್ದ ದಂಪತಿ ಇದೀಗ ಮತ್ತೆ ಒಂದಾಗಿದ್ದಾರೆ. ಹೌದು ಈ ಬಗ್ಗೆ ಮಾತನಾಡಿರುವ ಪೂಂ ನಮ್ಮ ನಡುವಿನ ಭಿನ್ನಾಫಿಪ್ರಾಯವನ್ನ ಬಗೆಹರಿಸಿಕೊಂಡಿದ್ದೇವೆ. ಇನ್ಮುಂದೆ ಜೊತೆಯಾಗಿ ಬಾಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ :
ಜೊತೆಜೊತೆಯಲಿ ಖ್ಯಾತಿಯ ಅನು ಬೆಳ್ಳಿ ತೆರೆಗೆ ಪ್ರವೇಶ..! ಸ್ಟಾರ್ ನಟನಿಗೆ “ಅನು” ನಾಯಕಿ
ಸೆಪ್ಟೆಂಬರ್ 22 ರಂದು ಪತಿ ಸ್ಯಾಂ ಬಾಂಬೆ ತಮ್ಮ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿ ಪೂನಂ ಪಾಂಡೆ ಗೋವಾ ಪೊಲೀಸರಿಗೆ ದೂರು ನೀಡಿದ್ದರು. ಸೆಪ್ಟೆಂಬರ್ 23 ರಂದು ಸ್ಯಾಮ್ ಬಾಂಬೆಗೆ ಜಾಮೀನು ಸಿಕ್ಕಿ ಹೊರಗೆ ಬಂದಿದ್ದರು. ಆ ನಂತರ ಈಗ ಇಬ್ಬರೂ ಸಹ ಮತ್ತೆ ಜೊತೆಯಾಗಿರುವುದಾಗಿ ಹೇಳಿದ್ದಾರೆ.