ಪಣಜಿ : ಎರಡು ವಾರದ ಹಿಂದೆ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದ ಬಾಲಿವುಡ್ ಹಾಡ್ ಬೆಡಗಿ ಪೂನಂ ಪಾಂಡೆ, ಇದೀಗ ತನ್ನ ಪತಿ ವಿರುದ್ಧ ದೂರು ದಾಖಲಿಸಿ ಜೈಲಿಗಟ್ಟಿದ್ದಾರೆ.
ಪೂನಂ ಎರಡು ವಾರದ ಹಿಂದೆ ಅಂದ್ರೆ ಕಳೆದ ಸೆಪ್ಟೆಂಬರ್ 11ರಂದು ತನ್ನ ಗೆಳಯ ಸ್ಯಾಮ್ ಬಾಂಬೆ ಅವರನ್ನು ವಿವಾಹವಾಗಿದ್ದರು.

ಆದರೆ ಇಂದು ಅದೇ ಸ್ಯಾಮ್ ಬಾಂಬೆ ನನಗೆ ಕಿರುಕುಳ ನೀಡುತ್ತಿದ್ದಾನೆ, ಹಲ್ಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಗೋವಾದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೂನಂ ನೀಡಿರುವ ದೂರಿನಲ್ಲಿ ಪೂನಂ ಗಂಡ ಸ್ಯಾಮ್ ಬಾಂಬೆ ಶೂಟಿಂಗ್ ನಲ್ಲಿದ್ದ ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಪೂನಂ ನೀಡಿದ ದೂರಿನ ಮೇರೆಗೆ ಇಂದು ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಕೆನಕೋನಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ತುಕಾರಂ ಚವಾನ್, ಪೂನಂ ಪಾಂಡೆಯವರು ಸೋಮವಾರ ರಾತ್ರಿ ಠಾಣೆಗೆ ಬಂದು ತಮ್ಮ ಪತಿ ಸ್ಯಾಮ್ ಬಾಂಬೆ ವಿರುದ್ಧ ಕಿರುಕುಳದ ಆರೋಪ ಮಾಡಿ ದೂರು ನೀಡಿದ್ದಾರೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಜೊತೆಗೆ ಹಲ್ಲೆ ಮಾಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಆತನನ್ನು ನಾವು ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.








