ಟೀಂ ಇಂಡಿಯಾ ಗೆದ್ದರೆ ಮತ್ತೆ ಬೆತ್ತಲಾಗಬೇಕಾ – ಪೂನಂ ಪಾಂಡೆ
ಪೂನಂ ಪಾಂಡೆ… ದಿನ ಬೆಳಗಾದ್ರೆ ಯಾವುದಾದರೂ ಒಂದು ಕಾಂಟ್ರವರ್ಸಿಯಲ್ಲಿ ತಮ್ಮ ಹೆಸರು ಇರದೇ ಹೋದ್ರೂ ಸರಿಯಾಗಿ ನಿದ್ದೆ ಬರೋದಿಲ್ಲ ಅನ್ಸುತ್ತೆ.. ವಿವಾದ ಅಂದ್ರೆ ಪೂನಂ.. ಪೂನಂ ಅಂದ್ರೆ ವಿವಾದ ಅನ್ನೋ ಅಷ್ಟರ ಮಟ್ಟಿಗೆ ಸದಾ ವಿವಾದಗಳ ಅಲೆಯಲ್ಲಿಯೇ ಸಿಲುಕಿರುತ್ತಾರೆ.. ಅದ್ರಲ್ಲೂ ಬೋಲ್ಡ್ ಹೇಳಿಕೆಗಳಿಂದಲೇ ಹೆಚ್ಚು ಪ್ರಸಿದ್ಧಿ.. ಅಂದ್ಹಾಗೆ ಪೂನಂ ಪಾಮಡೆ ಈ ಹಿಂದೆ ಟೀಂ ಇಂಡಿಯಾ ವಿಶ್ವಕಪ್ ಗೆದ್ರೆ ಬೆತ್ತಲಾಗುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು ಎಲ್ರಿಗೂ ಗೊತ್ತೇ ಇದೆ.. ಆದ್ರೆ ಇದೇ ಹೇಳಿಕೆಯನ್ನ ಇದೀಗ ಪೂನಂ ಮತ್ತೆ ರಿಪೀಟ್ ಮಾಡಿದ್ದಾರೆ.
ಹೌದು.. ಟೀಂ ಇಂಡಿಯಾ, ನ್ಯೂಜಿಲ್ಯಾಂಡ್ ವಿರುದ್ಧ ಜಯಗಳಿಸಿದರೆ ಮತ್ತೆ ಬೆತ್ತಲಾಗುತ್ತೇನೆ ಎಂದು ಹೇಳಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರೂ ಕಾಂಟ್ರವರ್ಸಿ ಕ್ವೀನ್ ಪೂನಂ, ‘ಕ್ರಿಕೆಟ್ ಜಾರಿಯಲ್ಲಿದೆ, ಜನ ಕ್ರಿಕೆಟ್ ನೋಡ್ತಿದ್ದಾರೆ, ಆಟಗಾರರು ಕ್ರಿಕೆಟ್ ಆಡ್ತಿದ್ದಾರೆ.. ಒಂದು ವೇಳೆ ಗೆದ್ದರೆ ನಾನು ಖಂಡಿತ ಬಟ್ಟೆ ಬಿಚ್ಚುತ್ತೇನೆ ಎಂದು ಮತ್ತೆ ಹೇಳಬೇಕಾ? ಈ ಬಗ್ಗೆ ನಾನು ಈಗ ಯಾವುದೇ ಸುಳಿವು ನೀಡುವುದಿಲ್ಲ. ಸಾಧ್ಯವಾದರೆ ನಾನು ವಿವಾದ ಮಾಡುವ ಬಗ್ಗೆ ಯೋಚಿಸುತ್ತೇನೆ’. ಎಂದು ಹೇಳಿದ್ದಾರೆ.
ಇನ್ನೂ ಕೆಲ ತಿಂಗಳ ಹಿಂದೆ ಪೂನಂ ಮದುವೆಯಾಗಿ ಒಂದೇ ವಾರಕ್ಕೆ ಪತಿ ವಿರುದ್ಧ ಪೊಲೀಸ್ ಟಾಣೆಯಲ್ಲಿ ದೂರು ಸಲ್ಲಿಸಿ , ದಾಂಪತ್ಯ ಕಲಹವನ್ನ ಬೀದಿ ರಂಪಾಟವನ್ನಾಗಿ ಮಾಡಿಕೊಮಡಿದ್ರು.. ನಂತರ ಇಬ್ಬರೂ ಒಂದಾಗಿ ಅಚ್ಚರಿ ಮೂಡಿಸಿದ್ರು..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








