18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಮುಂದೂಡಿಕೆ..? vaccination
ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಡಿಸ್ಕೌಂಟ್ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಲಸಿಕೆ ಪಡೆಯಲು ಆಸ್ಪತ್ರೆಗಳಿಗೆ ಹೋಗಲು ಸಮಸ್ಯೆ ಆಗುವ ಕಾರಣ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಿಕೆಯನ್ನು ಮುಂದೂಡುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವುದೇ ಲಸಿಕೆ ಕೊರತೆ ಇಲ್ಲ.
ರಾಜ್ಯಕ್ಕೆ 5 ಲಕ್ಷ ಡೋಸ್ ಬಂದಿದ್ದು, ಯುವರಿಕೆ ನೀಡಲು ಯಾವುದೇ ಸಮಸ್ಯೆ ಇಲ್ಲ.
ಆದ್ರೆ ಇಂದಿನಿಂದ ಹಲವು ನಿಬರ್ಂಧಗಳಿರಲಿದ್ದು, ಲಸಿಕೆ ಪಡೆಯಲು ಸಮಸ್ಯೆ ಉಂಟಾಗಿದೆ.
ಹೀಗಾಗಿ 14 ದಿನ ಮುಂದೂಡುವ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಕೈ ತಪ್ಪಿ ಹೋಗಿದ್ದು, ಸೋಂಕಿನ ಚೈನ್ ಬ್ರೇಕ್ ಮಾಡಲು ಸರ್ಕಾರ ಇಂದಿನಿಂದ ಮೇ. 24 ರವರೆಗೆ ರಾಜ್ಯಾದ್ಯಂತ ಕಠಿಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ.