Potato Juice : ಚರ್ಮದ ಆರೈಕೆ ಮತ್ತು ಕಾಂತಿಗಾಗಿ ಆಲೂಗಡ್ಡೆ ರಸ….
ಆಲೂಗಡ್ಡೆಯಿಂದ ಮಾಡಿದ ಆಹಾರಗಳನ್ನ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಇದರಲ್ಲಿ ದೇಹವನ್ನ ಬಲಪಡಿಸಲು ಮತ್ತು ದೇಹಕ್ಕೆ ಅಗತ್ಯವಿರುವ ಅನೇಕ ಪೋಷ್ಟಿಕಾಂಶಗಳು ಇದರಲ್ಲಿವೆ. ಆಲೂಗಡ್ಡೆಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತವೆ.
ಇವು ದೇಹಕ್ಕೆ ಮಾತ್ರವಲ್ಲದೇ ತ್ವಚೆಗೂ ಒಳ್ಳೆಯದು. ವಿಶೇಷವಾಗಿ ಒಣ ತ್ವಚೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಪರಿಹಾರವಾಗಿದೆ. ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಮತ್ತು ಕೊಳೆ ಹೋಗಲಾಡಿಸುವಲ್ಲಿ ಆಲೂಗಡ್ಡೆ ಪ್ರಮುಖ ಪಾತ್ರ ವಹಿಸುತ್ತದೆ. ಆಲೂಗಡ್ಡೆ ರಸವನ್ನು ಚರ್ಮದ ಆರೈಕೆಗಾಗಿ ವಿವಿಧ ರೂಪಗಳಲ್ಲಿ ಬಳಸಬಹುದು.
ಚರ್ಮದ ಸೌಂದರ್ಯಕ್ಕಾಗಿ ಆಲೂಗಡ್ಡೆ ರಸ
ನಿಂಬೆ, ಆಲೂಗಡ್ಡೆ ರಸ :- ಸ್ವಲ್ಪ ಆಲೂಗಡ್ಡೆ ರಸವನ್ನ ತೆಗೆದುಕೊಂಡು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಮುಖದ ಕಪ್ಪು ಕಲೆಗಳ ಮೇಲೆ ಲೇಪಿಸಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಕಪ್ಪು ಕಲೆಗಳು ಮಾಯವಾಗುತ್ತವೆ. ಮುಖ ಕಾಂತಿಯುತವಾಗುತ್ತದೆ ಮತ್ತು ನೈಸರ್ಗಿಕ ಹೊಳಪನ್ನ ಪಡೆದುಕೊಳ್ಳುತ್ತದೆ.
ಆಲೂಗೆಡ್ಡೆ ರಸ, ಮೊಸರು :- ಆಲೂಗಡ್ಡೆ ರಸಕ್ಕೆ ಮೊಸರು ಬೆರೆಸಿ ಚರ್ಮಕ್ಕೆ ಹಚ್ಚುವುದರಿಂದ ಹಲವಾರು ಪ್ರಯೋಜನ ಪಡೆಯಬಹುದು. ಈ ಮಿಶ್ರಣ ಹಚ್ಚುವುದರಿಂದ ಚರ್ಮ ತೇವಾಂಶದಿಂದ ಕೂಡಿರುತ್ತದೆ. ಇದು ತ್ವಚೆಯ ಮೇಲಿರುವ ಎಣ್ಣೆಯನ್ನ ಹೀರಿಕೊಂಡು ಜಿಡ್ಡಿನಂಶವನ್ನ ಕಡಿಮೆ ಮಾಡುತ್ತದೆ. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಸ್ವಲ್ಪ ಮೊಸರು ತೆಗೆದುಕೊಂಡು ಅದಕ್ಕೆ ಮೂರು ಚಮಚ ಆಲೂಗಡ್ಡೆ ರಸವನ್ನು ಸೇರಿಸಿ. ಒಂದು ಚಿಟಿಕೆ ಅರಿಶಿನವನ್ನು ಬೆರೆಸಿದ ನಂತರ ಚರ್ಮಕ್ಕೆ ಹಚ್ಚಿ 15 ನಿಮಿಷಗಳ ನಂತರ ಮುಖ ತೊಳೆಯಿರಿ.
ಅಲೋವೆರಾ, ಆಲೂಗೆಡ್ಡೆ:- ಅಲೋವೆರಾ ಜೆಲ್ ನ್ನ ತ್ವಚೆಯ ಆರೋಗ್ಯಕ್ಕಾಗಿ ಬಳಸುವುದು ನಿಮಗೆ ಗೊತ್ತೇ ಇದೆ. ಇದರ ಜೊತೆಗೆ ಆಲೂಗಡ್ಡೆಯನ್ನು ಪೇಸ್ಟ್ ಮಾಡಿ ಮತ್ತು ಅದರಲ್ಲಿ ಅಲೋವೆರಾ ಜೆಲ್ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ. ಈಗ ಸ್ವಲ್ಪ ಅಲೋವೆರಾ ಜೆಲ್ ಅನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ಮುಖದ ಮೇಲೆ ಮೃದುವಾಗಿ ಮಸಾಜ್ ಮಾಡಿ. ಇದನ್ನು ಮಾಡಿದ ನಂತರ ನಿಮ್ಮ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.
Potato Juice : Potato juice for skin care and glow….








