ತುಮಕೂರು: ಕೊರಟಗೆರೆ ಪಟ್ಟಣದಲ್ಲಿ ಹಾದು ಹೋಗುವ ತುಮಕೂರು ಮಧುಗಿರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಆಳವಾಗಿ ಗುಂಡಿಗಳು ಬಿದ್ದು ತಿಂಗಳುಗಳು ಕಳೆದರು ಸರಿಪಡಿಸದೇ ಇರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಶಾಸಕ ಹಾಗೂ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರಟಗೆರೆ ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪರಮೇಶ್ವರ್, ಪ್ರವಾಸಿ ಮಂದಿರದಲ್ಲಿ, ಕೊರಟಗೆರೆ ಪಟ್ಟಣದಲ್ಲಿ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಅದರಲ್ಲೂ ತಾಲ್ಲೂಕು ಕಛೇರಿಯ ತೋಟಗಾರಿಕೆ ಮುಂಭಾಗದಲ್ಲಿ ಆಳವಾಗಿ ಗುಂಡಿ ಬಿದ್ದಿದೆ. ಈ ಬಗ್ಗೆ ಹಲವು ಭಾರಿ ಸೂಚನೆ ನೀಡಿದ್ದರು ಸರಿಪಡಿಸದೇ ಇರುವ ಬಗ್ಗೆ ಕೊರಟಗೆರೆ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತಕ ಉಮಾಮಹೇಶ್ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಕೂಡಲೇ ಈ ರಸ್ತೆ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆದೇಶಿಸಿದರು. ಈಗಾಗಲೇ ಈ ರಸ್ತೆ ಅಭಿವೃದ್ದಿಗೆ 9.50 ಕೋಟಿ ರೂಗಳ ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ಮಂಜೂರಾಗಿದ್ದು ಶೀಘ್ರವಾಗಿ ಕಾಮಗಾರಿ ಪ್ರಾರಂಭವಾಗುತ್ತದೆ. ಅಲ್ಲಿಯವರೆಗೂ ಹದಗೆಟ್ಟಿರುವ ರಸ್ತೆಯನ್ನು ಸಂಚಾರಕ್ಕೆ ನಿರ್ವಹಣೆ ಮಾಡುವಂತೆ ಸೂಚಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಎಇಇ ಉಮಾಮಹೇಶ್, ಸದರಿ ರಸ್ತೆ ಅಭಿವೃದ್ದಿಗೆ ಸರ್ಕಾರ ದಿಂದ ಅನುದಾನ ಬಾರದೇ ಇದ್ದು ಅನುದಾನ ಬಂದ ತಕ್ಷಣ ರಸ್ತೆಯನ್ನು ದುರಸ್ಥಿಗೊಳಿಸುವುದಾಗಿ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








