ದೇಶದಲ್ಲಿ ಬಡತನ, ನಿರುದ್ಯೋಗದಿಂದ ನಿತ್ಯ 30 ಜನ ಆತ್ಮಹತ್ಯೆ : ಕಾಂಗ್ರೆಸ್ ಆತಂಕ congress tweet saaksha tv
ಬೆಂಗಳೂರು : ಬಡತನ ಹಾಗೂ ನಿರುದ್ಯೋಗ ದೇಶದಲ್ಲಿ ನಿತ್ಯ 30 ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎನ್ನುವುದು ಆತಂಕಕಾರಿ ಸಂಗತಿ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕೃಷಿ ಕಾನೂನುಗಳನ್ನು ಪ್ರಧಾನಿ ನರೇಂದ್ರ ಮೋದಿ ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿದರು. ಇದಕ್ಕೆ ಕಾಂಗ್ರೆಸ್ ಟ್ವೀಟ್ ಮಾಡಿ.. ಪ್ರಜೆಗಳ ಶಕ್ತಿಯ ಮುಂದೆ ಯಾವ ಸರ್ವಾಧಿಕಾರಿಯೂ ಗೆಲ್ಲುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ, ಸಾಬೀತಾಗುತ್ತಲೇ ಇರುತ್ತದೆ….
ಬಡತನ ಹಾಗೂ ನಿರುದ್ಯೋಗ ದೇಶದಲ್ಲಿ ನಿತ್ಯ 30 ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎನ್ನುವುದು ಆತಂಕಕಾರಿ ಸಂಗತಿ. ಇದು ಆಳುವವರು ಗಂಭೀರವಾಗಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ, ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ದೇಶದ ಜನತೆ ಬದುಕಲಾಗದ ಸ್ಥಿತಿಗೆ ತಲುಪುತ್ತಿದ್ದಾರೆ, ಮುಂದಿನ ದಿನಗಳು ಇನ್ನಷ್ಟು ಭೀಕರವಾಗಿರುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದೆ.