ಕೊರೊನಾ ಹೊಡೆತಕ್ಕೆ ಪೂರ್ವ ಏಷ್ಯಾದಲ್ಲಿ 11 ದಶಲಕ್ಷಕ್ಕೂ ಹೆಚ್ಚು ಜನ ಬಡತನದ ಬವಣೆಯಲ್ಲಿ ಕೈ ತೊಳೆಯುತ್ತಾರೆ ಎಂಬ ವರದಿ ಬಂದಿದೆ. ಮನು ಕುಲಕ್ಕೆ ಶಾಪವಾಗಿರುವ ಕೊರೊನಾ ವಿಶ್ವದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ಕೊರೊನಾ ಮಹಾಮಾರಿಯಿಂದ ದೇಶಗಳ ಅಭಿವೃದ್ದಿಗೆ ಕೊಡಲಿ ಪೆಟ್ಟು ಬಿದ್ದಂತೆ ಆಗಿದೆ. ವಿಶ್ವದ ಎಲ್ಲಾ ದೇಶಗಳಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿದೆ. ಪೂರ್ವ ಏಷ್ಯಾದ ದೇಶಗಳಲ್ಲಿ ಸರಿಸುಮಾರು 11 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಡತಕ್ಕೆ ದೂಡುತ್ತದೆ ಎಂಬ ವರದಿ ವಿಶ್ವಬ್ಯಾಂಕ್ ನಿಂದ ಹೊರ ಬಿದ್ದಿದೆ. ಕೊರೊನಾ ಹೊಡೆತದಿಂದ ಸುಧಾರಿಸಿಕೊಂಡ ದೇಶಗಳು ಉತ್ತಮ ಸನ್ನಿವೇಶದಲ್ಲಿ ಇದ್ದರೂ ಸಹ ಅಭಿವೃದ್ದಿಯಲ್ಲಿ ಹಿಂದೆ ಬೀಳುತ್ತವೆ. ಚೀನಾದ ವಿಸ್ತರಣೆಯು 2019ರಲ್ಲಿ 6.1 ಪ್ರತಿಶತ ದಿಂದ 2.3 ಪ್ರತಿಶತಕ್ಕೆ ಕುಠಿತವಾಗಿದೆ. ಈ ಬಗ್ಗೆ ವಿಶ್ವ ಬ್ಯಾಂಕ್ ನ ಮುಖ್ಯ ಆರ್ಥಿಕ ತಜ್ಞ ಆದಿತ್ಯ ಮಟ್ಟೂ ಆತಂಕ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ
ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...








