ಕೋಲಾರ : ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನ ಅಮಾನವೀಯವಾಗಿ ಅಂತ್ಯಕ್ರಿಯೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಬಂಧು ಬಳಗ, ರಕ್ತ ಸಂಬಂಧ, ಮಾನವೀಯತೆ ಸತ್ತು ಹೋಗಿದೆ, ಖಾಯಿಲೆಗಿಂತ ಹೆಚ್ಚಾಗಿ ನಾವು ರಾಕ್ಷರಂತೆ ವರ್ತಿಸುತ್ತಿದ್ದೇವೆ ಎಂದರು.
ಸರ್ಕಾರಕ್ಕೆ ತಿಳುವಳಿಕೆ ಕೊರತೆ ಇದೆ, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ತಿಳುವಳಿಕೆಯ ಕೊರತೆಯಿಂದ, ಜನರಲ್ಲಿ ಜಾಗೃತಿ ಬದಲಾಗಿ ಹೆದರಿಕೆ ಬಂದಿದೆ. ಅರಿವಿನ ಕೊರತೆಯಿಂದ ಕೊರೊನಾ ವಾರಿಯರ್ಸ್ ಗೂ ಇದರಿಂದ ಭಯವಾಗಿದೆ. ಸೋಂಕಿತರನ್ನು ವ್ಯವಸ್ಧಿತವಾಗಿ ಅಂತ್ಯಕ್ರಿಯೆ ಮಾಡಬೇಕಿತ್ತು. 15 ಅಡಿ ಆಳ ತೆಗೆದು ಅಂತ್ಯಕ್ರಿಯೆ ಮಾಡಬಹುದು, ಆದರೆ ನಮ್ಮಲ್ಲಿ ತಿಳುವಳಿಕೆ ಕೊರತೆ ಇದೆ ಎಂದಿದ್ದಾರೆ.
ನನ್ನ ರಕ್ತಸಂಬಂಧಿಗಳಲ್ಲಿ ಯಾರಿಗಾದ್ರೂ ಹೀಗಾದ್ರೆ ಹೇಗೆ ಅನ್ನೂ ಪ್ರಜ್ಞೆ ಸರ್ಕಾರಕ್ಕಿರಬೇಕು ಎಂದ ರಮೇಶ್ ಕುಮಾರ್ ನಾನು ಮಂತ್ರಿ, ಸರ್ಕಾರ ಅನ್ನೋದನ್ನ ಬಿಡಬೇಕಿದೆ, ಅಧಿಕಾರ ಶಾಶ್ವತವಲ್ಲ, ಮಾನವೀಯತೆ ಶಾಶ್ವತ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.







