ದಾವಣಗೆರೆ: ವಿದ್ಯುತ್ ತಂತಿ ದುರಸ್ತಿ ವೇಳೆ ವಿದ್ಯುತ್ ಪ್ರಹಹಿಸಿ ಒಬ್ಬ ಲೈನ್ ಮೃತಪಟ್ಟು ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆ ಹರಿಹರ ನಗರದಲ್ಲಿ ನಡೆದಿದೆ. ಹರಿಹರದ ಪಟೇಲ್ ಬಡಾವಣೆಯ ಸಾಯಿಬಾಬ ಮಂದಿರ ಬಳಿ ಜನರ ಕಣ್ಣೆದಉರೇ ಘಟನೆ ನಡೆದಿದೆ.

ವಿದ್ಯುತ್ ತಂತಿ ದುರಸ್ತಿ ಮಾಡಲು ಕರೆಂಟ್ ಕಂಬ ಹತ್ತಿದ್ದ ವೇಳೆ ವಿದ್ಯುತ್ ಹರಿದು ಈ ಅವಘಡ ನಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಕರೆಂಟ್ ಶಾಕ್‍ನಿಂದ ವಿದ್ಯುತ್ ಕಂಬದ ಮೇಲೆ ಇಬ್ಬರು ವ್ಯಕ್ತಿಗಳು ನೇತಾಡುತ್ತಿದ್ದು, ಜನರು ದಿಕ್ಕು ತೋಚದಂತಾಗಿತ್ತು.

ನಂತರ ಸ್ಥಳಕ್ಕೆ ಸಾರ್ವಜನಿಕರು ಬಂದು ಒಬ್ಬರನ್ನ ಇಳಿಸುವ ವೇಳೆ ಮತ್ತೊಬ್ಬ ಕಣ್ಣಮುಂದೆ ಲೈನ್‍ಗೆ ತಾಕಿ ಗಂಭೀರ ಗಾಯಗೊಂಡಿದ್ದಾನೆ.
ಘಟನೆಯನ್ನು ಕಣ್ಣೆದುರೇ ನೋಡಿದ ಸ್ಥಳೀಯರು ಹೌಹಾರಿದ್ದಾರೆ. ಲೈನ್ ಕಂಬದಲ್ಲೇ ಇದ್ದ ಇಬ್ಬರನ್ನ ಸ್ಥಳೀಯ ಜನರು ಏಣಿ ಹಾಕಿ ಕೆಳಗೆ ತಂದಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಹೆಸರು ಗುರುತು ಪತ್ತೆಯಾಗಿಲ್ಲ, ಹರಿಹರ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








