power of youth
‘ಪವರ್ ಆಫ್ ಯೂತ್’ ಹಾಡಿಗೆ ಪವರ್ ಸ್ಟಾರ್ ಫ್ಯಾನ್ಸ್ ಫಿದಾ..!
ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದೆ ಪವರ್ ಆಫ್ ಯೂತ್ ಹಾಡು. ಹೌದು ಸ್ಯಾಂಡಲ್ ನ ಬಹುನಿರೀಕ್ಷೆಯ ಪವರ್ ಆಫ್ ಯೂತ್ ಹಾಡು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಹಾಡು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದ್ದು, ಅಪ್ಪು ಫ್ಯಾನ್ಸ್ , ಅಣ್ಣವ್ರ ಫ್ಯಾನ್ಸ್ ಪುನೀತ್ ರಾಜ್ ಕುಮಾರ್ ಅವರ ಮಾಸ್ ಲುಕ್, ಅವರ ಡ್ಯಾನ್ಸ್ ಸ್ಟೆಪ್ಸ್ ಗೆ ಫಿದಾ ಆಗಿದ್ದಾರೆ. ಈ ಹಾಡು ಸದ್ಯ ಯೂಟ್ಯೂಬ್ ನಲ್ಲಿ ಕನ್ನಡ ಅಷ್ಟೇ ಅಲ್ದೇ ತೆಲುಗಿನಲ್ಲೂ ಹವಾ ಸೃಷ್ಟಿ ಮಾಡಿದೆ.
ಇತ್ತೀಚೆಗಷ್ಟೇ ಹಾಡಿನ ಪ್ರೋಮೋ ರಿಲೀಸ್ ಆಗಿ ಅಭಿಮಾನಿಗಳ ಕಾತರತೆ ಹೆಚ್ಚಿಸಿತ್ತು. ಇದೀಗ ಪೂರ್ಣ ಹಾಡು ಬಿಡುಗಡೆಯಾಗಿ ಹವಾ ಸೃಷ್ಟಿ ಮಾಡಿದೆ. ತೆಲುಗಿನಲ್ಲೂ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ತೆಲುಗಿನ ಅಭಿಮಾನಿಗಳು ವೆಲ್ ಕಮ್ ಟೂ ಟಾಲಿವುಡ್ ಅಪ್ಪ ಸರ್ ಅಂತ ಕಮೆಂಟ್ ಮಾಡಿ ಪುನೀತ್ ಅವರಿಗೆ ಜೈ ಕಾರ ಹಾಕ್ತಿದ್ದಾರೆ.
ಹೈದರಾಬಾದ್ ನ ಕಾಸ್ಟ್ಲಿಯೆಸ್ಟ್ ಏರಿಯಾದಲ್ಲಿ ಕಿಚ್ಚನ ಹೊಸ ಫ್ಲಾಟ್..?
ಇತ್ತ ಕನ್ನಡದಲ್ಲಿ ಹವಾ ಸೃಷ್ಟಿಸಿರುವ ಪವರ್ ಆಫ್ ಯೂತ್ ಹಾಡಿಗೆ ಅಪ್ಪು ಅಭಿಮಾನಿಗಳಷ್ಟೇ ಅಲ್ಲ ಕನ್ನಡ ಸಿನಿಪ್ರಿಯರೇ ದಂಗಾಗಿದ್ದಾರೆ. ಅಪ್ಪು ರಗಡ್ ಲುಕ್ ಗೆ ಫಿದಾ ಆಗಿದ್ದಾರೆ. ಅಪ್ಪು ಡ್ಯಾನ್ಸ್ ಗೆ ವಾವ್ ವಾ್ ಅಂತಿದ್ದಾರೆ. ಮ್ಯೂಸಿಕ್ ಸೌಂಡ್ ಬೀಟ್ಸ್ ಗೆ ತಾವು ನಿಂತಲ್ಲೇ ಸ್ಟೆಪ್ ಹಾಕ್ತಿದ್ದಾರೆ. ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಯುವರತ್ನ ಟೀಂ ಗೆ ಎಲ್ಲೆಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದುಬರ್ತಿದೆ. ಗಿಟಾರ್ ಹಿಡಿದು ಯೂತ್ ಫುಲ್ ಲುಕ್ ನಲ್ಲಿ ಭರ್ಜರಿ ಸ್ಟೆಪ್ಟ್ ಹಾಗಿ ಅಭಿಮಾನಿಗಳನ್ನ ಫಿದಾ ಗೊಳಿಸಿದ್ದಾರೆ ಪುನೀತ್ ರಾಜ್ ಕುಮಾರ್ ಅವರು.
ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಭರ್ಜರಿ ರೆಸ್ಪಾನ್ಸ್ , ಸಾವಿರಾರು ಲೈಕ್ಸ್ , ಮಿಲಿಯನ್ ವೀವ್ಸ್ , ಕಮೆಂಟ್ಸ್ ಗಳನ್ನ ಪಡೆದುಕೊಂಡಿದೆ. ಇನ್ನೂ ಈ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲೂ ರಿಲೀಸ್ ಆಗಲಿದೆ. ಸಿನಿಮಾಗೆ ಸಂತೋಶ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದು, ಸುಯೇಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
power of youth
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







