Japan | ಭೂಕಂಪಕ್ಕೆ ಜಪಾನ್ ತತ್ತರ.. 4 ಜನ ಸಾವು, 90 ಮಂದಿಗೆ ಗಾಯ
7.4 ತೀವ್ರತೆಯ ಪ್ರಬಲ ಭೂಕಂಪ
ಫುಕುಶಿಮಾ ಕರಾವಳಿಯಲ್ಲಿ ಭೂಕಂಪ
4 ಜನ ಸಾವು, 90 ಮಂದಿಗೆ ಗಾಯ
ಸಣ್ಣ ಪ್ರಮಾಣದಲ್ಲಿ ಸುನಾಮಿ
ಟೊಕಿಯೋ : ಜಪಾನ್ ನಲ್ಲಿ ಬುಧವಾರ ರಾತ್ರಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
ಪರಿಣಾಮ ಪೀಠೋಪಕರಣಗಳು, ಮನೆಗಳು ಜಖಂಗೊಂಡಿವೆ. ನಾಲ್ಕು ಜನರು ಸಾವನ್ನಪ್ಪಿದ್ದು, 90 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭೂಕಂಪನದೊಂದಿಗೆ ಸಣ್ಣ ಪ್ರಮಾಣದಲ್ಲಿ ಸುನಾಮಿ ಅಪ್ಪಳಿಸಿದ್ದು, ಸುನಾಮಿಯಿಂದ ಹೆಚ್ಚು ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ, ಭೂಕಂಪದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. 97 ಜನ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಕೆಲವು ಸ್ಥಳೀಯ ರೈಲುಗಳು ಸೇವೆಯನ್ನು ಪುನರಾರಂಭಿಸಲಾಗಿದೆ.
ಭೂಕಂಪದಿಂದಾಗಿ ಟೊಹೊಕು ಶಿಂಕನ್‌ಸೆನ್ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ಸದ್ಯ ಹಾನಿಯಾದ ಪ್ರದೇಶದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ವರದಿಯಾಗಿದೆ. Powerful quake off north Japan kills 4 more than 90 injured