ಏಷ್ಯಾದ ಮೋಸ್ಟ್ ಹ್ಯಾಂಡ್ಸಮ್ ಹೀರೊಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಇಬ್ಬರು – ನಂಬರ್. 1 ಸ್ಥಾನದಲ್ಲಿ ಪ್ರಬಾಸ್..!
ಬಾಹುಬಲಿ ಸಿನಿಮಾ ಮೂಲಕ ಇಡೀ ವಿಶ್ವಾದ್ಯಂತ ಚಿರಪರಿಚಿತರಾಗಿ ಅನೇಕ ಅಭಿಮಾನಿಗಳನ್ನ ಸಂಪಾದನೆ ಮಾಡಿ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದ ಪ್ರಭಾಸ್ ಬಾಲಿವುಡ್ ಸೋ ಕಾಲ್ಡ್ ಸ್ಟಾರ್ ಗಳನ್ನ ಸಹ ಹಿಂದಿಟ್ಟಿದ್ರು.. ಆದ್ರೆ ಇದೀಗ ಹೊಸದೊಂದು ದಾಖಲೆ ಮಾಡಿದ್ದಾರೆ.. ಏಷ್ಯಾದ ಮೋಸ್ಟ್ ಹ್ಯಾಂಡ್ಸಮ್ ಸೆಲೆಬ್ರಿಟಿಗಳ ಪೈಕಿ ಪ್ರಭಾಸ್ ಎಲ್ಲಾ ಟಾಪ್ ನಟರನ್ನ ಸೈಡ್ ಲೈನ್ ಮಾಡಿ ನಂಬರ್ 1 ಸ್ಥಾನವನ್ನ ತಮ್ಮದಾಗಿಸಿಕೊಂಡಿದ್ದಾರೆ..
ಪ್ರತಿಷ್ಠಿತ ಆನ್‌ಲೈನ್ ಪೋರ್ಟಲ್ ಒಂದು ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ಪ್ರಭಾಸ್ ಏಷ್ಯಾದ ಮೋಸ್ಟ್ ಹ್ಯಾಂಡ್ಸಮ್ ಹೀರೊ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ನಟ ಪ್ರಭಾಸ್ ಬಿಟ್ಟು ಇನ್ನೊಬ್ಬ ಭಾರತೀಯ ನಟರಿದ್ದಾರೆ.. ಅವರಿಗೆ 7ನೇ ಸ್ಥಾನ ಸಿಕ್ಕಿದೆ.. ಹಿಂದಿ ನಟ ವಿವಿಯಾನ್ ಸೇನಾ 7ನೇ ಸ್ಥಾನದಲ್ಲಿದ್ದಾರೆ. ಅಂದ್ಹಾಗೆ ವಿವಿಯಾನ್ ಹಿಂದಿ ಧಾರಾವಹಿಗಳು ಹಾಗೂ ರಿಯಾಲಿಟಿ ಶೋಗಳ ಮೂಲಕವೇ ಜನಪ್ರಿಯತೆ ಗಳಿಸಿದ್ದಾರೆ. ಇನ್ನೂ ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿರುವ ಪಾಕಿಸ್ತಾನಿ ನಟ ಫಹಾದ್ ಖಾನ್ 8ನೇ ಸ್ಥಾನದಲ್ಲಿದ್ದಾರೆ.
ಪ್ರಭಾಸ್ ನಂತರ 2ನೇ ಸ್ಥಾನದಲ್ಲಿ ಪಾಕಿಸ್ತಾನದ ನಟ ಇಮ್ರಾನ್ ಅಬ್ಬಾಸ್ ನಖ್ವಿ ಇದ್ದಾರೆ. 3ನೇ ಸ್ಥಾನದಲ್ಲಿ ಜಪಾನ್‌ನ ನಟ ಜಿನ್ ಅಕಾನಿಶಿ, 4ನೇ ಸ್ಥಾನಲ್ಲಿ ದಕ್ಷಿಣ ಕೊರಿಯಾದ ನಟ ಕಿಮ್ ಹ್ಯೂನ್ ಜುಂಗ್ ಇದ್ದಾರೆ.. ಕಿಮ್ ಹ್ಯೂನ್ ಜುಂಗ್ ಕೆ ಪಾಪ್ ನಲ್ಲಿಯೂ ಗುರುತಿಸಿಕೊಂಡಿದ್ದು , ಸಿನಿಮಾ , ಡ್ರಾಮಾಗಳಲ್ಲೂ ಕಾಣಿಸಿಕೊಂಡು ಹೆಚ್ಚು ಪ್ರಸಿದ್ಧಿ ಗಳಿಸಿದ್ದಾರೆ.. 5ನೇ ಸ್ಥಾನದಲ್ಲಿ ವಿಯೇಟ್ನಮ್ ನಟ ನ್ಹಾನ್ ಪೂಕ್ ನಿನ್ , 6ನೇ ಸ್ಥಾನದಲ್ಲಿ ಚೀನಾದ ಹುವಾಂಗ್ ಕ್ಸಿಯೋಮಿಂಗ್ , 9ನೇ ಸ್ಥಾನದಲ್ಲಿ ಥೈಲ್ಯಾಂಡ್ ನ ಥಾನಾವಾಟ್ ವಟ್ಟನಪುಟಿ , 10ನೇ ಸ್ಥಾನದಲ್ಲಿ ತೈವಾನ್ ನ ವಾಲೆಸ್ ಹುವೋ ಇದ್ದಾರೆ.