prabhas as salaar
‘ಮೋಸ್ಟ್ ವೈಲೆಂಟ್ ಮೆನ್’ ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ..!
ಪ್ರಭಾಸ್ ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ : ಟೈಟಲ್ ಏನ್ ಗೊತ್ತಾ..?
ಕೆಜಿಎಫ್ ತಂಡದಿಂದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ
ಕನ್ನಡದ ಹೆಮ್ಮೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿದ್ದಾರೆ. ಅದು ಕೂಡ ಸದ್ಯ ಭಾರತೀಯ ಚಿತ್ರರಂಗದ ಬಿಗ್ ಸ್ಟಾರ್ ಈ ಚಿತ್ರದ ಹೀರೋ ಆಗಲಿದ್ದಾರೆ.
ಕೆಜಿಎಫ್ ಬಳಿಕ ನಿರ್ದೇಶಕ ಪ್ರಶಾಂತ್ ಯಾವ ಸಿನಿಮಾ ಮಾಡ್ತಾರೆ..? ಯಾವ ಸ್ಟಾರ್ ಜೊತೆ ಪ್ರಶಾಂತ್ ಚರಿತ್ರೆ ಸೃಷ್ಠಿ ಮಾಡ್ತಾರೆ..? ಯಾವಾಗ ಆ ಸಿನಿಮಾ ಅನೌನ್ಸ್ ಆಗುತ್ತೆ ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಕೆಜಿಎಫ್ ಟೀಂ ಮತ್ತೊಂದು ಹೈ ವೋಲ್ಟೇಜ್ ಸಿನಿಮಾ ಮಾಡಲು ಮುಂದಾಗಿದೆ. ಈ ಸಿನಿಮಾದಲ್ಲಿ ಬಾಹುಬಲಿ ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ತಾಯಿದ್ದಾರೆ. ಇನ್ನೂ ಈಗಾಗಲೇ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದೆ.

ಅಂದ್ಹಾಗೆ ಪ್ರಶಾಂತ್ ನೀಲ್ ಅವರ ಮುಂದಿನ ಫ್ಯಾನ್ ಇಂಡಿಯಾ ಸಿನಿಮಾಗೆ ಸಲಾರ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಪೋಸ್ಟರ್ ನಲ್ಲಿ ಪ್ರಭಾಸ್ ಡೇರಿಂಗ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ‘ ದ ಮೋಸ್ಟ್ ವೈಲೆಂಟ್ ಮೆನ್… ಕಾಲ್ಡ್ ಒನ್ ಮೆನ್.. ದ ಮೋಸ್ಟ್ ವೈಲೆಂಟ್ ಪ್ರಭಾಸ್ ಇನ್ ಅಂಡ್ ಆಸ್ ಸಲಾರ್ ಎಂದು ಪೋಸ್ಟರ್ ರಿಲೀಸ್ ಆಗಿ ಗಾಂಧಿನಗರವಷ್ಟೇ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲೇ ಭಾರೀ ಸಂಚಲನ ಸೃಷ್ಟಿ ಮಾಡಿದೆ.
ಇನ್ನು ಪ್ರಭಾಸ್ ಕ್ರೇಜ್ ಗೆ ತಕ್ಕಂತೆ ಪ್ರಶಾಂತ್ ನೀಲ್ ಅವರು ಸಿನಿಮಾ ಕಥೆ ರೆಡಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾಸ್ ನಾಯಕ ಅನ್ನೋದು ಬಿಟ್ಟರೆ ಸಿನಿಮಾದ ಬಗ್ಗೆ ಹೆಚ್ಚೇನು ಮಾಹಿತಿ ಬಹಿರಂಗವಾಗಿಲ್ಲ. ಹೆಚ್ಚಿನ ಡೀಟೇಲ್ಸ್ ಮುಂದಿನ ತಿಂಗಳು ಸಿಗುವ ನಿರೀಕ್ಷೆಯಿದೆ. ಒಟ್ಟಾರೆ ಉಗ್ರಂ, ಕೆಜಿಎಫ್ ನಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಇಡೀ ದೇಶದ ಗಮನ ಸೆಳೆದಿರುವ ಪ್ರಶಾಂತ್ ನೀಲ್ ಅವರತ್ತ ಮತ್ತೊಮ್ಮೆ ಎಲ್ಲರ ಚಿತ್ತ ನೆಟ್ಟಿರೋದಂತೂ ಸುಳ್ಳಲ್ಲ. ಪ್ರಭಾಸ್ ಅವರ ನಾಯಕತ್ವದಲ್ಲಿ ಮತ್ತೊಂದು ಫ್ಯಾನ್ ಇಂಡಿಯಾ ಸಿನಿಮಾ ಬರುತ್ತಿರೋದು ಅಭಿಮಾನಿಗಳ ಕಾತರತೆ ಹೆಚ್ಚಿಸಿದೆ.
prabhas as salaar
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







