ಬಾಹುಬಲಿ ಸಿನಿಮಾದಿಂದ ಪ್ರಪಂಚವ್ಯಾಪ್ತಿಯಾಗಿ ಸ್ಟಾರ್ ಇಮೇಜ್ ಪಡೆದ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ಚಿತ್ರ ಮಾಡಲು ಬಾಲಿವುಡ್ ನಿರ್ದೇಶಕರು ಭಾರಿ ಆಸಕ್ತಿ ತೋರುತ್ತಿದ್ದಾರೆ. ಈ ಕ್ರಮವಾಗಿ ತಾನಾಜಿ ಚಿತ್ರದ ನಿರ್ದೇಶಕ ಓಂ ರಾವತ್ ಜೊತೆ ಪ್ರಭಾಸ್ ಸಿನಿಮಾ ಮಾಡಲಿದ್ದಾರೆ ಎಂಬೋದು ತಿಳಿದಿರುವ ವಿಚಾರವೇ. ಆದ್ರೆ ಈ ಚಿತ್ರ ಯಾವ ನೇಪಥ್ಯದಲ್ಲಿ ತೆರೆಕಾಣಲಿದೆ ಎಂಬ ಕಾತುರಕ್ಕೆ ಬ್ರೇಕ್ ಹಾಕುತ್ತಾ ಇವತ್ತು ಬೆಳಿಗ್ಗೆ 7.11 ನಿಮಿಷಕ್ಕೆ ಈ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಪ್ರಭಾಸ್ 22ನೇ ಸಿನಿಮಾಗೆ ಆದಿಪುರುಷ ಎಂಬ ಟೈಟಲ್ ಫಿಕ್ಸ್ ಮಾಡಿರೋದಾಗಿ ನಟ ಪ್ರಭಾಸ್, ನಿರ್ದೇಶಕ ಓಂ ರಾವತ್ ಪ್ರಕಟಿಸಿದ್ದಾರೆ. “ಸೆಲೆಬ್ರೇಟಿಂಗ್ ವಿಕ್ಟರಿ ಆಫ್ ಗುಡ್ ಓವರ್ ಇವಿಲ್” ಅನ್ನೋದು ಇದರ ಕ್ಯಾಪ್ಷನ್. ಈ ಪೋಸ್ಟರ್ ಪುರಾಣ ಕಥೆಗಳನ್ನು ಬಿಂಬಿಸುವಂತಿದ್ದು, ಒಂದೇ ಪೋಸ್ಟ್ ನ ಎ ಅಕ್ಷರದಲ್ಲಿ ರುದ್ರ ತಾಂಡವವಾಡುತ್ತಿರುವ ಆದಿಪುರುಷ ಶಿವ, ಗಧೆ ಹಿಡಿದ ಹನುಮಂತ, ಬಿಲ್ಲು ಹಿಡಿದ ರಾಮ, ಕೆಳಗೆ ಹತ್ತು ತಲೆಗಳ ರಾವಣನ ಚಿತ್ರವಿದೆ.
ಈ ಸಿನಿಮಾ 3ಡಿಯಲ್ಲಿ ರೂಪುಗೊಳ್ಳುತ್ತಿರೋದು ಇದರ ವಿಶೇಷವಾಗಿದೆ. ಇದು ತೆಲುಗು, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳನ್ನು ತಯಾರಾಗುತ್ತಿದೆ. ಟಿ ಸಿರೀಸ್, 500 ಕೋಟಿ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ.
ಪ್ರಭಾಸ್ ತಮ್ಮ 22ನೇ ಸಿನಿಮಾದಲ್ಲಿ ರಾಮ ಅಥವಾ ವಿಷ್ಣುವಿನ ಪಾತ್ರದಲ್ಲಿ ಕಾಣಿಸಿಲಿದ್ದಾರೆ ಎಂದು ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ. ಇದೇ ನಿಜವಾದರೇ ಪ್ರಭಾಸ್ ಕೆರಿಯರ್ ನಲ್ಲಿ ಈ ಸಿನಿಮಾ ಪ್ರತ್ಯೇಕವಾಗಿ ನಿಂತುಬೀಡುತ್ತದೆ. ಮತ್ತೊಂದು ಕಡೆ ಲಾಕ್ ಡೌನ್ ನಲ್ಲೂ ಸಿನಿಮಾ ಅನೌನ್ಸ್ ಮಾಡಿ ತಮ್ಮನ್ನು ಸರ್ಪ್ರೈಸ್ ಮಾಡಿದ್ದಾರೆ ಎಂದು ಡಾರ್ಲಿಂಗ್ ಅಭಿಮಾನಿಗಳು #Prabhas22, #Adipurush ಅನ್ನು ಟ್ರೆಂಡಿಂಗ್ ಮಾಡುತ್ತಿದ್ದಾರೆ.