ಕೆಜಿಎಫ್ ತಂಡದಿಂದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ
ಮಲ್ಟಿ ಸ್ಟಾರ್ ಸಿನಿಮಾ ಮಾಡಲಿದ್ದಾರೆ ಪ್ರಶಾಂತ್ ನೀಲ್
ಕನ್ನಡದ ಹೆಮ್ಮೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿದ್ದಾರೆ. ಅದು ಕೂಡ ಸದ್ಯ ಭಾರತೀಯ ಚಿತ್ರರಂಗದ ಬಿಗ್ ಸ್ಟಾರ್ ಈ ಚಿತ್ರದ ಹೀರೋಯಾಗಲಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದ ಗಲ್ಲಿಯಲ್ಲಿ ಹರಿದಾಡುತ್ತಿದೆ.
ಕೆಜಿಎಫ್ ಬಳಿಕ ನಿರ್ದೇಶಕ ಪ್ರಶಾಂತ್ ಯಾವ ಸಿನಿಮಾ ಮಾಡ್ತಾರೆ..? ಯಾವ ಸ್ಟಾರ್ ಜೊತೆ ಪ್ರಶಾಂತ್ ಚರಿತ್ರೆ ಸೃಷ್ಠಿ ಮಾಡ್ತಾರೆ..? ಯಾವಾಗ ಆ ಸಿನಿಮಾ ಅನೌನ್ಸ್ ಆಗುತ್ತೆ ಅಂತಾ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಈ ಮಧ್ಯೆ ಪ್ರಶಾಂತ್ ನೀಲ್ ಅವರು ಟಾಲಿವುಡ್ ನ ಯಂಗ್ ಟೈಗರ್ ಎನ್ ಟಿ ಆರ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಇದಕ್ಕೆ ಮೈತ್ರಿ ಮೂವೀಸ್ ಬಂಡವಾಳ ಹೂಡಲಿದೆ.
ಈಗಾಗಲೇ ಮೈತ್ರಿ ಮೂವೀಸ್ ನಿಂದ ಪ್ರಶಾಂತ್ ನೀಲ್ ಅಡ್ವಾನ್ಸ್ ಪಡೆದಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡಿತ್ತು.
ಇದೀಗ ಹೊಸ ಸುದ್ದಿಯೊಂದು ಹೊರಬಂದಿದ್ದು, ಭಾರತೀಯ ಚಿತ್ರರಂಗವನ್ನೇ ಅಚ್ಚರಿಗೊಳಿಸಿದೆ. ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರೀ ಮತ್ತೆ ಪ್ರಶಾಂತ್ ನೀಲ್ ನತ್ತ ತಿರುಗಿ ನೋಡುವಂತಾಗಿದೆ.
ಸಿನಿ ಮೂಲಗಳ ಮಾಹಿತಿ ಪ್ರಕಾರ ಪ್ರಶಾಂತ್ ನೀಲ್ ಮಲ್ಟಿಸ್ಟಾರರ್ ಸಿನಿಮಾ ಮಾಡಲು ಮುಂದಾಗಿದ್ದಾರಂತೆ.
ಈ ಚಿತ್ರದಲ್ಲಿ ಬಾಹುಬಲಿ ಪ್ರಭಾಸ್, ಯಂಗ್ ಟೈಗರ್ ಜ್ಯೂನಿಯರ್ ಎನ್ ಟಿಆರ್ ಅಭಿನಯಿಸಲಿದ್ದಾರಂತೆ. ಕೆಜಿಎಫ್ ಚಿತ್ರದ ತಂತ್ರಜ್ಞಾನರೇ ಈ ಸಿನಿಮಾದಲ್ಲೂ ಕೆಲಸ ಮಾಡಲಿದ್ದಾರಂತೆ.
ಇದೊಂದು ಬಿಗ್ ಬಜೆಟ್ ಸಿನಿಮಾಯಾಗಿರಲಿದ್ದು, ಗಟ್ಟಿ ಕಥೆಯ ಜೊತೆಗೆ ಹೀರೋಯಿಸಂ ಹೈಲೆಟ್ ಮಾಡುವ ಎಲಿಮೆಂಟ್ ಗಳನ್ನು ಒಳಗೊಂಡಿರಲಿವೆ ಎಂದು ಹೇಳಲಾಗುತ್ತಿದೆ.
ಇನ್ನು ಪ್ರಭಾಸ್ ಕ್ರೇಜ್, ಎನ್ ಟಿಆರ್ ಫೇಮ್ ಗೆ ತಕ್ಕಂತೆ ಪ್ರಶಾಂತ್ ನೀಲ್ ಕಥೆ ರೆಡಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಮುಂದಿನ ತಿಂಗಳು ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.










