RRR ಗೆ ಆ ಸೀನ್ ಹೈಲೆಟ್.. ಪ್ರಭಾಸ್ ಲೇಟ್ review prabhas-review-rrr-movie saaksha tv
ಜೂನಿಯರ್ ಎನ್ ಟಿಆರ್ ಹಾಗೂ ರಾಮಚರಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಆರ್ ಆರ್ ಆರ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗಳಿಕೆಯ ಸುನಾಮಿ ಸೃಷ್ಟಿಸುತ್ತಿದೆ.
ಮಾರ್ಚ್ 25 ರಂದು ಬಿಡುಗಡೆಯಾದ ಪ್ಯಾನ್-ಇಂಡಿಯಾ ಚಿತ್ರ ಇದುವರೆಗೆ 1050 ಕೋಟಿ ರೂ ಗಳಿಸಿ ಮುನ್ನುಗ್ಗುತ್ತಿದೆ.
ದಕ್ಷಿಣದಿಂದ ಬಾಲಿವುಡ್ನವರೆಗೆ ಎಲ್ಲರೂ ಚಿತ್ರ ಅದ್ಭುತವಾಗಿದೆ ಎಂದು ಹೊಗಳುತ್ತಿದ್ದಾರೆ.
ಇದೀಗ ಪ್ರಭಾಸ್ ಆರ್ ಆರ್ ಆರ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. “ನಾನು RRR ಚಲನಚಿತ್ರವನ್ನು ನೋಡಿದ್ದೇನೆ.
ತುಂಬಾ ಚೆನ್ನಾಗಿ ಇಷ್ಟವಾಯಿತು. ದೇಶದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕೆಲವೇ ಚಿತ್ರಗಳಲ್ಲಿ ಇದೂ ಒಂದು.
RRR 1100 ಕೋಟಿ ಗಳಿಸುವತ್ತ ಸಾಗುತ್ತಿದೆ. ಸುಮಾರು 10 ದೃಶ್ಯಗಳಲ್ಲಿ ನನ್ನ ಕಣ್ಣಲ್ಲಿ ನೀರು ತುಂಬಿತ್ತು… 50 ದೃಶ್ಯಗಳು ನನ್ನನ್ನು ಸೆಳೆದವು. ಈ ಸಿನಿಮಾ ತುಂಬಾ ಚೆನ್ನಾಗಿದೆ’ ಎಂದಿದ್ದಾರೆ ಪ್ರಭಾಸ್. prabhas-review-rrr-movie








