ಬೊಮ್ಮಾಯಿ ಸಿಎಂ ಆದಮೇಲೆ ಕೋವಿಡ್ ಕಡಿಮೆ ಆಗುತ್ತಿದೆ : ಪ್ರಭು ಚವ್ಹಾಣ್
ಹಾವೇರಿ : ಬಸವರಾಜ ಬೊಮ್ಮಾಯಿ ಸಿಎಂ ಆದಮೇಲೆ ಕೊರೊನಾ ಕಡಿಮೆ ಆಗುತ್ತಿದೆ. ನಮ್ಮ ಮುಖ್ಯಮಂತ್ರಿಗಳ ಬಾಯಿಗುಣ ಸರಿಯಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಮೊದಲು ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭಿಸಿದ್ದೇವೆ. ನಾನು ಮಂತ್ರಿಯಾದ ಬಳಿಕ ಪ್ರಾಣಿ ಕಲ್ಯಾಣ ಮಂಡಳಿ ರಚನೆ ಮಾಡಿದ್ದೇನೆ ಎಂದು ತಿಳಿಸಿದರು.
ಅಲ್ಲದೆ ರಾಜ್ಯದಲ್ಲಿ ಪಶು ಸಂಜೀವಿನಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ, ರೈತರ ಮನೆ ಬಾಗಿಲಿಗೆ ಹೋಗುತ್ತದೆ.
ರಾಜ್ಯದ ಇತಿಹಾಸದಲ್ಲಿ ಈ ಯೋಜನೆ ಆರಂಭ ಮಾಡಿದ್ದೇನೆ. ಶೀಘ್ರದಲ್ಲಿ ಪ್ರತಿ ಜಿಲ್ಲೆಗೆ ಅಂಬ್ಯುಲೆನ್ಸ್ ಕೊಡುತ್ತೇವೆ. ಕೋವಿಡ್ ಕಾರಣಕ್ಕೆ ಅಂಬ್ಯುಲೆನ್ಸ್ ನೀಡೋದು ವಿಳಂಬ ಆಗಿದೆ ಎಂದರು.
ಇದೇ ವೇಳೆ ಕಸಾಯಿ ಖಾನೆ ಬಂದ್ ಆಗಬೇಕು ಎಂದು ಒತ್ತಾಯಿಸಿದ ಸಚಿವರು, ಬಕ್ರೀದ್ ಸಮಯದಲ್ಲಿ ಎಲ್ಲ ಜಿಲ್ಲೆಗಳ ಎಂಪಿಗಳ ಜೊತೆ ಚರ್ಚೆ ಮಾಡಿ 6 ರಿಂದ 7 ಸಾವಿರ ಜಾನುವಾರುಗಳ ರಕ್ಷಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.