ಕರ್ನಾಟಕ ಉಸ್ಕಾ ಬಾಪ್ ಕಾ ನಹೀ ಹಮಾರಾ ಹೈ : ಪ್ರಭು ಚವ್ಹಾಣ್
ಚಿಕ್ಕೋಡಿ : ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬ ಮಹಾರಾಷ್ಟ್ರ ಡಿಸಿಎಂ ಅಜೀತ್ ಪವಾರ್ ಹೇಳಿಕೆಗೆ ಸಚಿವ ಪ್ರಭುಚೌವ್ಹಾಣ್ ” ಕರ್ನಾಟಕ ಉಸ್ಕಾ ಬಾಪ್ ಕಾ ನಹೀ ಹಮಾರಾ ಹೈ ಎಂದು ಭರ್ಜರಿ ಟಾಂಗ್ ಕೊಟ್ಟಿದ್ದಾರೆ.
ಇಂದು ಪ್ರಭುಚೌವ್ಹಾಣ್ ಅವರು ನಿಪ್ಪಾಣಿಯಲ್ಲಿ 2019-20ನೇ ಸಾಲಿನ ಆರ್ಐಡಿಎಫ್ ಟ್ರ್ಯಾಂಚ್ – 25 ಅಡಿ ಮಂಜೂರಾದ ಪಶು ಆಸ್ಪತ್ರೆ ಕಟ್ಟಡದ ಶಂಕು ಸ್ಥಾಪನೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಕರ್ನಾಟಕ ಉಸ್ಕಾ ಬಾಪ್ ಕಾ ನಹೀ.. ಹೇ ಹಮಾರಾ ಹೈ’ ಎಂದು ಮಹಾರಾಷ್ಟ್ರ ಡಿಸಿಎಂ ಅಜೀತ್ ಪವಾರ್ ತಿರುಗೇಟು ನೀಡಿದರು.
ಅಜಿತ್ ಪವಾರ್ ಬೆಳಗಾವಿ ಬೆಂಕಿ: ಉದ್ಧಟನ ಮಾಡಿದ್ರೆ ಸುಮ್ಮನಿರಲ್ಲ ಅಂದ್ರು ಬಿಎಸ್ವೈ
ಅಜೀತ್ ಪವಾರ್ ಅವರು ಏನ್ ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ.
ಕರ್ನಾಟಕ ಮಾತೇ ನಮ್ಮ ತಾಯಿ. ಅವರಿಗೆ ಏನು ಸಂಬಂಧವಿಲ್ಲ. ಅವರ ಮಾತಿಗೆ ಯಾವುದೇ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದು ಚೌವ್ಹಾಣ್ ಹೇಳಿದರು.
ಇದೇ ವೇಳೆ ಮರಾಠ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಬೇಡಿಕೆಯಂತೆ ಸಿಎಂ ಯಡಿಯೂರಪ್ಪನವರು ನಿರ್ಣಯ ತೆಗೆದುಕೊಳ್ಳುತ್ತಾರೆ.
ಎಲ್ಲರಿಗೂ ನ್ಯಾಯ ಸಿಗಬೇಕು. ಎಲ್ಲರ ಅಭಿವೃದ್ಧಿ, ವಿಕಾಸ ಕಾರಣಕ್ಕಾಗಿ ಪ್ರಾಧಿಕಾರ ರಚನೆ ಮಾಡಲೇಬೇಕು ಎಂದು ಸಚಿವರು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










