ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಹೆಸರಲ್ಲಿ 16 ವರ್ಷದ ಬಾಲಕಿಯ ಖಾತೆಗೆ 10 ಕೋಟಿ ರೂ !
ಬಲಿಯಾ, ಸೆಪ್ಟೆಂಬರ್25: ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ 16 ವರ್ಷದ ಬಾಲಕಿಯೊಬ್ಬಳ ಬ್ಯಾಂಕ್ ಖಾತೆಗೆ 10 ಕೋಟಿ ರೂ.ಗಳು ಜಮಾ ಮಾಡಲಾಗಿದೆ.
ಜಿಲ್ಲೆಯ ಬಾನ್ಸ್‌ಡಿಹ್ ಪೊಲೀಸ್ ಠಾಣೆಯಲ್ಲಿ ಈ ವಿಷಯದಲ್ಲಿ ದೂರು ದಾಖಲಾಗಿದೆ. ದೂರಿನ ಪ್ರಕಾರ, ಕಾನ್ಪುರ್ ದೇಹತ್ ಜಿಲ್ಲೆಯ ನೀಲೇಶ್ ಕುಮಾರ್ ಎಂಬ ಹೆಸರಿನಲ್ಲಿ ಒಬ್ಬ ವ್ಯಕ್ತಿಯು ಎರಡು ವರ್ಷಗಳ ಹಿಂದೆ 16 ವರ್ಷದ ಬಾಲಕಿಯನ್ನು ಕರೆದು ಆಕೆಯ ವೈಯಕ್ತಿಕ ಗುರುತಿನ ವಿವರಗಳನ್ನು ಕೇಳಿದ್ದಾನೆ. ಕುಮಾರ್ ಸರೋಜ್ ಎಂಬ ಹುಡುಗಿಯ ಆಧಾರ್ ಕಾರ್ಡ್ ಛಾಯಾಚಿತ್ರಗಳನ್ನು ಪಡೆದುಕೊಂಡಿದ್ದು, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಖಾತೆಗೆ ಹಣವನ್ನು ವರ್ಗಾಯಿಸಲು ಇವುಗಳು ಬೇಕಾಗಿವೆ ಎಂದು ಹೇಳಿದ್ದಾನೆ.
ಅಂಚೆ ಕಚೇರಿಯ ಉಳಿತಾಯ ಯೋಜನೆಗಳು – ಹೊಸ ನಿಯಮಗಳ ಮಾಹಿತಿ ಇಲ್ಲಿದೆ
ಅನಕ್ಷರಸ್ಥಳಾದ ಹದಿಹರೆಯದ ಹುಡುಗಿ, 2018 ರಿಂದ ಬಾನ್ಸ್‌ಡಿಹ್‌ನ ಅಲಹಾಬಾದ್ ಬ್ಯಾಂಕಿನ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದಾಳೆಂದು ವರದಿಯಾಗಿದೆ. ಸೋಮವಾರ ಬ್ಯಾಂಕ್‌ಗೆ ಹೋದ ಆಕೆಗೆ ಅಲ್ಲಿನ ಅಧಿಕಾರಿಗಳು ಆಕೆಯ ಖಾತೆಯಲ್ಲಿ ಬಾಕಿ ಹಣ 9.99 ಕೋಟಿ ರೂ. ಇರುವುದಾಗಿ ತಿಳಿಸಿದ್ದಾರೆ. ಇದರಿಂದ ಅಘಾತಕ್ಕೆ ಒಳಗಾದ ಅವಳು ತಕ್ಷಣವೇ ಪೊಲೀಸ್ ಠಾಣೆಗೆ ವರದಿ ಮಾಡಿದ್ದಾಳೆ.
ಹುಡುಗಿಗೆ ಹಣದ ಮೂಲದ ಬಗ್ಗೆ ಯಾವುದೇ ಸುಳಿವು ಇಲ್ಲ ಮತ್ತು ಆಕೆ ನೀಲೇಶನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಾನ್ಸ್‌ಡಿಹ್‌ನ ಪೊಲೀಸ್ ಠಾಣೆ ತಿಳಿಸಿದೆ.
ಆರೋಗ್ಯಕರ ಜೀವನಕ್ಕಾಗಿ ದೈನಂದಿನ ಆಹಾರದಲ್ಲಿ ಇರಬೇಕಾದ 10 ತರಕಾರಿಗಳು
ಫ್ಯಾಕ್ಟ್ ಚೆಕ್ ವರದಿಯ ಪ್ರಕಾರ, ಹುಡುಗಿಯ ಖಾತೆಯಲ್ಲಿ ವರದಿಗಳು ತಿಳಿಸಿರುವಂತೆ 10 ಕೋಟಿಯಲ್ಲ, ಬದಲಾಗಿ 5,000 ಕೋಟಿ ರೂ. ಇದೆ. ಆದರೆ, ಬಾಲಕಿಯ ಖಾತೆಯಲ್ಲಿ 17 ಲಕ್ಷ ರೂ.ಗಳ ಒಂದು ವಹಿವಾಟು ನಡೆದಿದೆ ಎಂದು ವರದಿ ತಿಳಿಸಿದೆ.








