ಪ್ರಧಾನ್ ಮಂತ್ರಿ ಸುರಕ್ಷಾ ಭೀಮ ಯೋಜನೆ-12 ರೂ ಠೇವಣಿಯಿಂದ 2 ಲಕ್ಷ ರೂ ಮರಣ ವಿಮೆ ಖಾತೆ
ಕೇಂದ್ರ ಸರ್ಕಾರ ದೇಶದ ಬಡ ಜನರನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಒಂದು ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆ. ಈ ಯೋಜನೆಯಲ್ಲಿ ವರ್ಷಕ್ಕೆ 12 ರೂಪಾಯಿಗಳ ಪ್ರೀಮಿಯಂ ಠೇವಣಿ ಇರಿಸಿದರೆ, ಸರ್ಕಾರದಿಂದ 2 ಲಕ್ಷ ರೂಪಾಯಿವರೆಗೆ ಮರಣ ವಿಮೆ ಖಾತರಿ ಪಡೆಯಬಹುದು. ಅಂದರೆ ತಿಂಗಳಿಗೆ ಒಂದು ರೂಪಾಯಿಯಂತೆ ವರ್ಷಕ್ಕೆ 12 ರೂಪಾಯಿ ಅನ್ನು ಠೇವಣಿ ಇರಿಸಬೇಕು. ಪ್ರತಿ ವರ್ಷ ಮೇ ತಿಂಗಳಲ್ಲಿ 12 ರೂಪಾಯಿಯನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಒಂದು ವೇಳೆ ಮೇ ತಿಂಗಳ ಕೊನೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದ ಪಕ್ಷದಲ್ಲಿ ಯೋಜನೆಯನ್ನು ರದ್ದುಗೊಳಿಸಲಾಗುತ್ತದೆ. ಆದ್ದರಿಂದ ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಫಲಾನುಭವಿಗಳು ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಇಟ್ಟುಕೊಳ್ಳುವುದು ಬಹಳ ಅಗತ್ಯ.
ಈ ಯೋಜನೆಯಡಿಯಲ್ಲಿ ವಿಮೆ ಮಾಡಿದವರು ಯಾವುದಾದರೂ ಕಾರಣದಿಂದ ಮೃತಪಟ್ಟ ಪಕ್ಷದಲ್ಲಿ ಅವರ ಕುಟುಂಬದವರು 2 ಲಕ್ಷ ರೂಪಾಯಿ ವರೆಗಿನ ವಿಮಾ ಮೊತ್ತವನ್ನು ಪಡೆಯುತ್ತಾರೆ.
ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆ (ಪಿಎಂಎಸ್ಬಿವೈ) ವಿಮಾ ಹೊಂದಿರುವವರು ಸಂಪೂರ್ಣ ಅಂಗವಿಕಲರಾದ ಪಕ್ಷದಲ್ಲಿ ಕೂಡ 2 ಲಕ್ಷ ರೂಪಾಯಿ ಪರಿಹಾರ ಪಡೆಯುತ್ತಾರೆ. ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ 18ರಿಂದ 70 ವರ್ಷ ವಯಸ್ಸಿನವರು ಭಾಗಶಃ ಅಂಗವಿಕಲರಾದರೆ ಅವರು 1 ಲಕ್ಷ ರೂ. ರಕ್ಷಣೆ ಪಡೆಯಬಹುದು.