Prahlad Joshi | ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಜೋಶಿ ಹೇಳಿದ್ದೇನು ?
ಧಾರವಾಡ : ಸಾಮಾನ್ಯವಾಗಿ ಮೂರು ವರ್ಷ ಅವಧಿ ನಮ್ಮಲ್ಲಿ ಇರುತ್ತದೆ. ಆದರೆ ಮೂರು ವರ್ಷದ ಬಳಿಕ ಬದಲಾವಣೆ ಮಾಡಲೇಬೇಕು ಅಂತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಧಾರವಾಡದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಬದಲಾವಣೆ ಬರುತ್ತೆ ಅಂತಾ ಮಾಧ್ಯಮಗಳು ಹೇಳುತ್ತಿವೆ.
ಸಾಮಾನ್ಯವಾಗಿ ಮೂರು ವರ್ಷ ಅವಧಿ ನಮ್ಮಲ್ಲಿ ಇರುತ್ತದೆ. ಆದರೆ ಮೂರು ವರ್ಷದ ಬಳಿಕ ಬದಲಾವಣೆ ಮಾಡಲೇಬೇಕು ಅಂತಿಲ್ಲ.
ಮಾಧ್ಯಮಗಳೇ ಬದಲಾವಣೆ ಅಂತಾ ಹೇಳುತ್ತಿವೆ. ನಮ್ಮಲ್ಲಿ ಆ ಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದರು.
ಇದೇ ವೇಳೆ ಚಿತ್ರದುರ್ಗ ಸ್ವಾಮೀಜಿ ಮೇಲಿನ ಪೋಕ್ಸೋ ಪ್ರಕರಣ ಸಂಬಂಧ ಮಾತನಾಡಿದ ಅವರು, ಅವರ ಮೇಲೆ ಕೇಸ್ ಆಗಿದೆ, ಅದರ ತನಿಖೆ ನಡೆಯುತ್ತಿದೆ.
ಹೀಗಾಗಿ ಹೆಚ್ಚು ಮಾತನಾಡುವ ಅಗತ್ಯ ಇಲ್ಲ. ಅವರು ನಾಡಿನ ಒಬ್ಬ ಪ್ರತಿಷ್ಠಿತ ಸ್ವಾಮೀಜಿ.
ಸೂಕ್ತವಾದ, ನ್ಯಾಯಯುತವಾದ ತನಿಖೆಯಾಗಲಿ. ಅಲ್ಲಿಯವರೆಗೆ ಎಲ್ಲದ್ದಕ್ಕೂ ಪ್ರತಿಕ್ರಿಯೆ ಕೊಡಬೇಕಿಲ್ಲ ಎಂದು ಹೇಳಿದರು.