ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಲೋಹಿತ್ ನಿರ್ದೇಶನದಲ್ಲಿ “ಮಾಫಿಯಾ” ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಈ ಸಿನಿಮಾದ ಮುಹೂರ್ತ ಡಿಸೆಂಬರ್ 2 ರಂದು ನೆರವೇರಲಿದೆ.. ವಿಶೇಷ ಅಂದ್ರೆ ಈ ಸಿನಿಮಾಗಾಗಿ ಪ್ರಜ್ವಲ್ ದೇವರಾಜ್ 2 ವರ್ಗಳಿಂದ ಬೆಳಸಿದ್ದ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ..
ಹೌದು ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ 35 ನೇ ಚಿತ್ರ “ಮಾಫಿಯಾ”.. ಇದೇ ಸಿನಿಮಾಗಾಗಿ ಪ್ರಜ್ವಲ್ ಹೇರ್ ಕಟ್ ಮಾಡಿಸಿದ್ದಾರೆ.. ಹೊಸ ಹೇರ್ ಸ್ಟೈಲ್ ನಲ್ಲಿ ಪ್ರಜ್ವಲ್ ಪಕ್ಕಾ “ಜೆಂಟಲ್ ಮೆನ್ ” ಆಗಿ ಕಾಣಿಸುತ್ತಿದ್ದಾರೆ..
ಅಷ್ಟೇ ಅಲ್ಲ ಆ ಕೂದಲನ್ನು ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಅಂದ್ಹಾಗೆ “ಮಮ್ಮಿ” ಮತ್ತು “ದೇವಕಿ”ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಲೋಹಿತ್ ನಿರ್ದೇಶನದಲ್ಲಿ, ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಮಾಫಿಯಾ” ಚಿತ್ರದ ಮುಹೂರ್ತ ಸಮಾರಂಭ ಡಿಸೆಂಬರ್ 2ರಂದು ನಡೆಯಲಿದೆ. ಚಿತ್ರೀಕರಣ ಡಿಸೆಂಬರ್ 6 ಆರಂಭವಾಗಲಿದೆ.
ಪ್ರಜ್ವಲ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಲಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್.ಬಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ತರುಣ್ ಈ ಚಿತ್ರದ ಛಾಯಾಗ್ರಹಕರು.









