ಹುಟ್ಟುಹಬ್ಬದ ಸಂಭ್ರಮದಲ್ಲಿ ಡೈನಾಮಿಕ್ ಪ್ರಿನ್ಸ್ – ಅಭಿಮಾನಿಗಳಿಗೆ ಗಿಫ್ಟ್
ಬೆಂಗಳೂರು: ಸ್ಯಾಂಡಲ್‍ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ಅವರಿಗೆ ಸೆಲೆಬ್ರಿಟಿಗಳು , ಅಭಿಮಾನಿಗಳು ಹುಟ್ಟುಹಬ್ಬದ ಶೂಭಾಷಯಗಳನ್ನ ಕೋರುತ್ತಿದ್ದಾರೆ..
ಅಲ್ಲದೇ ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳಿಗೂ ಉಡುಗೊರೆ ಸಿಕ್ಕಿದೆ. ಹೌದು ಪ್ರಜ್ವಲ್ ಅಭಿನಯದ ಮುಂಬರುವ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ..
ಆದ್ರೆ ಕೊರೊನಾ ಹಾವಳಿಯ ನಡುವೆ ಅದ್ಧೂರಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಿ ಸರಳವಾಗಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಮಾಫಿಯಾ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಈ ಸಿನಿಮಾಕ್ಕೆ ನಿರ್ದೇಶಕ ಗುರುದತ್ ಆ್ಯಕ್ಷನ್ ಕಟ್ ಹೇಳಿದ್ದು, ಪೋಸ್ಟರ್‌ನಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್ ಡ್ರೆಸ್ ತೊಟ್ಟು, ಜೀಪಿನೊಳಗೆ ಕುಳಿತುಕೊಂಡು ಖಡಕ್ ಲುಕ್ ನೀಡಿದ್ದಾರೆ.
ಈ ಮುನ್ನ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯಿಸಿದ್ದ ಅಂಬಿ ನಿಂಗೆ ವಯಸ್ಸಾಯ್ತು ಸಿನಿಮಾವನ್ನು ನಿರ್ದೇಶಿಸಿದ್ದ ಗುರುದತ್ ಈಗ ಮಾಫಿಯಾದಲ್ಲಿ ಕೆಲಸ ಮಾಡಲಿದ್ದಾರೆ. ಚಿತ್ರಕ್ಕೆ ಕುಮಾರ್ ಬಂಡವಾಳ ಹೂಡಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣವಿದೆ..
ಅಂದ್ಹಾಗೆ ಕೊರೊನಾ ಮೊದಲನೆ ಅಲೆ ಕಡಿಮೆಯಾಗಿದ್ದ ಸಂದರ್ಭದಲ್ಲಿ ಸಿನಿಮಾ ಮಂದಿರಗಳು ತೆರೆದಾಗ ಪ್ರಜ್ವಲ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು.. ಸಿನಿಮಾ ಕುಡ ಹಿಟ್ ಆಗಿತ್ತು..