ಸುತ್ತಿಗೆ ಹಿಡಿದು ಬಂದ ಡೆವಿಲ್ ಪ್ರಜ್ವಲ್ ದೇವರಾಜ್
ಮಾಸ್ ಲುಕ್ನಲ್ಲಿ ಪ್ರಜ್ವಲ್ ದೇವರಾಜ್ ಮಿಂಚು!
ಡೈನಾಮಿಕ್ ಪ್ರಿನ್ಸ್ ಮಾಫಿಯಾ ಟೀಸರ್ ಬಿಡುಗಡೆ
ಮೂರು ಭಾಷೆಗಳಲ್ಲಿ ಮಾಫಿಯಾ ಟೀಸರ್ ರಿಲೀಸ್
ಪ್ರಜ್ವಲ್ ರಗಡ್ ಲುಕ್ಸ್ ಗೆ ಅಭಿಮಾನಿಗಳು ಫಿದಾ
ಲೋಹಿತ್ ನಿರ್ದೇಶನದ ಸಿನಿಮಾ ಮಾಫಿಯಾ
ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ ಮಾಫಿಯಾ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಸುತ್ತಿಗೆ ಹಿಡಿದು ಬರುವ ಪ್ರಜ್ವಲ್ ದೇವರಾಜ್, ಒನ್ಸ್ ಅಪಾನ್ ಎ ಟೈಂ, ದ ಡೆವಿಲ್, ಸ್ಟುಡ್ ಅಗೆನೆಸ್ಟ್ ಟು ದಿ ಗಾಡ್..! ಎಂದು ತೀಷ್ಣವಾಗಿ ಡೈಲಾಗ್ ಹೊಡೆಯುತ್ತಾರೆ. ಇದು ನೋಡುಗರಿಗೆ ಸಖತ್ ಕಿಕ್ ಕೊಡುತ್ತಿದೆ. ಮುಖ್ಯವಾಗಿ 1 ನಿಮಿಷ 13 ಸೆಕೆಂಡ್ ಗಳ ಟೀಸರ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಅನೂಪ್ ಸೀಳಿನ್ ಅವರ ಹಿನ್ನಲೆ ಸಂಗೀತ…!! ಮಾಫಿಯಾ ಟೀಸರ್ ನಲ್ಲಿರುವ ಬಿಜಿಎಂ, ಕೇಳಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮಾಫಿಯಾ ಅಂತಾ ಟೈಟಲ್ ಹೇಳುವಂತೆಯೇ ಇದು ಕಂಟೆಂಟ್ ಓರಿಯಂಟೆಡ್ ಸಿನಿಮಾ ಅನ್ನೋದು ಟೀಸರ್ ನಲ್ಲಿ ಗೊತ್ತಾಗುತ್ತಿದೆ.
ಇನ್ನು ಈ ಸಿನಿಮಾವನ್ನು ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಲೋಹಿತ್ ನಿರ್ದೇಶನ ಇವೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದ ಟೀಸರ್ ಕೂಡ ಏಕಕಾಲಕ್ಕೆ ಬಿಡುಗಡೆಯಾಗಿದೆ. ಕನ್ನಡದಲ್ಲಿ ಧ್ರುವ ಸರ್ಜಾ, ಸತೀಶ್ ನೀನಾಸಂ ಹಾಗೂ ರಿಷಬ್ ಶೆಟ್ಟಿ, ತೆಲುಗಿನಲ್ಲಿ ಸುಧೀರ್ ಬಾಬು ಮತ್ತು ರಾಜಶೇಖರ್ ಹಾಗೂ ತಮಿಳಿನಲ್ಲಿ ಸತ್ಯರಾಜ್, ವೆಂಕಟ್ ಪ್ರಭು, ಪಾರ್ಥಿಬನ್ ಹಾಗೂ ನಿರ್ದೇಶಕ ಶಿಶೀಂದ್ರನ್ “ಮಾಫಿಯಾ” ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಗೆ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ದೇವರಾಜ್ ಅವರು ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ತರುಣ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ವಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ.









