ಇಲ್ಲಿ ಹೇಳ್ತೀನಿ ಕೇಳಿ.. ನಾವಿರೋ ತನಕ ಹಾಸನದಲ್ಲಿ ಜೆಡಿಎಸ್ ಗೆ ಸೋಲಿಲ್ಲ : ಪ್ರಜ್ವಲ್
ಹಾಸನ : ಹಾಸನ ಜಿಲ್ಲೆಯಲ್ಲಿ ನಾವು ಇರುವ ತನಕ ಯಾರು ಏನು ಮಾಡೋಕೆ ಆಗಲ್ಲ. ಹಾಸನ ಜಿಲ್ಲೆಯಲ್ಲಿ ನಾವಿರುವ ತನಕ ಯಾವ ಚುನಾವಣೆನೂ ಸೋಲಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ಇಂದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ನಡೆಯಿತು. ಇದರಲ್ಲಿ ಭಾಗಿಯಾಗಿ ಮಾತನಾಡಿದ ಪ್ರಜ್ವಲ್ ರೇವಣ್ಣ, ಬಿಜೆಪಿಯವರು ಗ್ರಾಮಸ್ವರಾಜ್ ಕಾರ್ಯಕ್ರಮನಾದರೂ ಮಾಡ್ಲಿ.
ಸ್ವರಾಜ್ ಮಜ್ದಾ ಬಸ್ಸನ್ನಾದ್ರು ಬಿಡ್ಲಿ. ಆದ್ರೆ ಹಾಸನ ಜಿಲ್ಲೆಯಲ್ಲಿ ನಾವ್ ಇರೋ ತನಕ ಯಾರು ಏನು ಮಾಡಕ್ಕಾಗಲ್ಲ. ಹಾಸನ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರು ಇರುವವರೆಗೂ ಯಾವ ಚುನಾವಣೆನೂ ಸೋಲಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಯ ಚುನಾವಣೆಗಳಿಗಿಂತ ಚಿಕ್ಕ ಚುನಾವಣೆಯಾಗಿರುವ ಸಹಕಾರ ಸಂಘಗಳ ಚುನಾವಣೆಯಲ್ಲಿ ಕೂಡ ಕೇವಲ ಒಂದೇ ಒಂದು ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ.
ಐದು ಜನ ಮಿನಿಸ್ಟರಾದ್ರು ಬರಲಿ , ಇಲ್ಲಂದ್ರೆ ಸಚಿವ ಸಂಪುಟವೇ ಬರಲಿ ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನವನ್ನ ನಮ್ಮ ಕಾರ್ಯಕರ್ತರು ಛಿದ್ರವಾಗಲು ಬಿಡುವುದಿಲ್ಲ.
ಜಾತಿ ಒಡೆಯೋದ್ರಲ್ಲಿ ಸಿದ್ದರಾಮಯ್ಯ ನಿಸ್ಸೀಮ : ಶೋಭಾ ಕರಂದ್ಲಾಜೆ
ಆ ನಂಬಿಕೆ ನನಗಿದೆ. ಗ್ರಾಮಸ್ವರಾಜ್ ಕಾರ್ಯಕ್ರಮ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ 30ನೇ ತಾರೀಕು ಎಲ್ಲವನ್ನು ಮಾತನಾಡುತ್ತೇನೆ ಎಂದು ಪ್ರಜ್ವಲ್ ತಿಳಿಸಿದರು.
ಇನ್ನು ಬಿಜೆಪಿಯವರು ಕೊಡುವ ಆಶ್ವಾಸನೆಗಳು ಬರೀ ಆಶ್ವಾಸನೆಗಳಾಗಿಯೇ ಉಳಿಯಲಿವೆ. ಅವರ ಆಶ್ವಾಸನೆಗಳು ಎಂದಿಗೂ ಕಾರ್ಯ ರೂಪಕ್ಕೆ ಬರಲ್ಲ ಎಂದು ಟೀಕಿಸಿದ ಸಂಸದರು, ಶಿರಾ ಚುನಾವಣೆಯಲ್ಲಿ ಕಾಡುಗೊಲ್ಲರ ಮತವನ್ನು ಪಡೆಯಲು ಅವರಿಗೆ ನಿಗಮ ಮಾಡಿದರು.
ಆದರೆ ಅದಕ್ಕೆ ಹಣವನ್ನು ಬಿಡುಗಡೆ ಮಾಡದೆ ಇವತ್ತು ಅದು ಯಾವ ಸ್ಥಿತಿಗೆ ಬಂದಿದೆ ಯೋಚಿಸಬೇಕಾಗಿದೆ. ಹಾಗಾಗಿ ಬಿಜೆಪಿ ಸುಳ್ಳಿನ ರಾಜಕೀಯ ಮಾಡಿ ಜನರನ್ನು ಮರುಳು ಮಾಡುವುದು ಹೆಚ್ಚು ದಿನ ನಡೆಯುವುದಿಲ್ಲ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










