ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಖ್ಯಾತ ಸಾಮಾಜಿಕ ಜಾಲತಾಣವಾದ ‘ಇನ್‌ಸ್ಟಾಗ್ರಾಂ’ ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಮ್ಮ ಹೊಸ ಖಾತೆ ತೆರೆದಿರುವ ಪ್ರಜ್ವಲ್ ‘ಇನ್‌ಸ್ಟಾಗ್ರಾಂ’ ಮೂಲಕ ಸದಾ ಜನರ ಸಂಪರ್ಕದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.
ರಾಜ್ಯದ ಸಮಸ್ಯೆಗಳು, ನೆಲ , ಜಲ, ಭಾಷೆ ಇನ್ನಿತರೇ ಯಾವುದೇ ವಿಚಾರಗಳ ಕುರಿತು ನನ್ನ ಅಭಿಪ್ರಾಯಗಳು ಹಾಗೂ ನಿಲುವುಗಳನ್ನು ನಾನು ‘ಇನ್‌ಸ್ಟಾಗ್ರಾಂ’ ಖಾತೆ ಮೂಲಕ ಹಂಚಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ. 
ಇನ್ಮುಂದೆ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನನ್ನ ಅನಿಸಿಕೆ ಅಭಿಪ್ರಾಯಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತೇನೆ ಎಂದೂ ಸಹ ಮಾಹಿತಿ ನೀಡಿದ್ದಾರೆ.








