ಕೆಜಿಎಫ್ ಚಾಪ್ಟರ್-1 ರಲ್ಲಿ ಆನಂದ್ ಇಂಗಳಗಿಯಾಗಿ ರಾಖಿ ಭಾಯ್ ಕಥೆ ನಿರೂಪಣೆ ಮಾಡಿದ್ದ ಅನಂತ್ ನಾಗ್, ಚಾಪ್ಟರ್ -2ರಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಾರಣಾಂತರಗಳಿಂದ ಅನಂತ್ ನಾಗ್ ಕೆಜಿಎಫ್ ಸಿನಿಮಾದಿಂದ ಹೊರ ಬಂದಿದ್ದು, ಮೊದಲ ಭಾಗದಲ್ಲಿ ಅನಂತ್ ನಾಗ್ ಮಾಡಿದ್ದ ಪಾತ್ರವನ್ನು ಚಾಪ್ಟರ್ 2ರಲ್ಲಿ ಪ್ರಕಾಶ್ ರಾಜ್ ಮಾಡಲಿದ್ದಾರೆ.
ಹೌದು..! ಕೊರೊನಾ ಲಾಕ್ ಡೌನ್ ಹಿನ್ನೆಲೆ ಸ್ಥಗಿತವಾಗಿದ್ದ ಸಿನಿಮಾ ಶೂಟಿಂಗ್ ಇಂದಿನಿಂದ ಆರಂಭವಾಗಿದೆ. ಇದೀಗ ಮೊದಲ ದಿನದ ಶೂಟಿಂಗ್ ನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಆನಂದ್ ಇಂಗಳಗಿ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಂಡಿರುವುದು.
ಇತ್ತೀಚೆಗೆ ಕೆಲ ಕಾರಣಾಂತರಗಳಿಂದ ಅನಂತ್ ನಾಗ್ ಕೆಜಿಎಫ್ ಸಿನಿಮಾದಿಂದ ಹೊರನಡೆದಿದ್ದರು ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಬಳಿಕ ಅವರ ಪಾತ್ರ ಯಾರು ಮಾಡಲಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಇದೀಗ ಅದೆಲ್ಲದಕ್ಕೂ ಫೋಟೋ ಸಮೇತ ಉತ್ತರ ಸಿಕ್ಕಿದೆ.
ಮೊದಲ ಭಾಗದಲ್ಲಿ ಅನಂತ್ ನಾಗ್ ಮಾಡಿದ್ದ ಪಾತ್ರವನ್ನು ಚಾಪ್ಟರ್ 2ರಲ್ಲಿ ಪ್ರಕಾಶ್ ರೈ ಮಾಡಲಿದ್ದಾರೆ. ಅಷ್ಟೇ ಅಲ್ಲ ಆನಂದ್ ಇಂಗಳಗಿ ಲುಕ್ ನಲ್ಲಿ ಪ್ರಕಾಶ್ ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೂ ಫೋಟೋವೊಂದು ರಿವೀಲ್ ಆಗಿದೆ.









