ಚಿತ್ರೀಕರಣದ ವೇಳೆ ಬಿದ್ದು ಪೆಟ್ಟು ಮಾಡಿಕೊಂಡ ಪ್ರಕಾಶ್ ರಾಜ್ – ಶಸ್ತ್ರ ಚಿಕಿತ್ಸೆಗೆ ಹೈದ್ರಾಬಾದ್ ಗೆ ತೆರಳಿದ ನಟ
ಚಿತ್ರೀಕರಣದ ವೇಳೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಗಾಯಗೊಂಡಿದ್ದು, ಅವರನ್ನ ಶಸ್ತ್ರ ಚಿಕಿತ್ಸೆಗಾಗಿ ಹೈದ್ರಾಬಾದ್ ನ ಆಸ್ಪತ್ರೆಗೆ ರವಾನೆ ಮಾಡಲಿದೆ.. ಚೆನ್ನೈನಲ್ಲಿ ಸಿನಿಮಾವೊಂದರ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ರಾಜ್ ಅವರು ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ನಂತರ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಆದ್ರೆ ಈ ಘಟನೆ ಹೇಗೆ ನಡೆಯಿತು ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.. ಸುದ್ದಿ ಬಹಿರಂಗವಾಗ್ತಿದ್ದಂತೆ ಅಭಿಮಾನಿಗಳು ಆತಂಕಗೊಂಡಿದ್ದರು.. ಆದ್ರೆ ಟ್ವಿಟ್ಟರ್ ಮೂಲಕ ಪ್ರಕಾಶ್ ರಾಜ್ ಅವರು ಖುದ್ದು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, “ಆತಂಕ ಪಡುವ ಅಗತ್ಯವಿಲ್ಲ, ಸಣ್ಣ ಮುರಿತ. ನನ್ನ ಸ್ನೇಹಿತ ಡಾ ಗುರುವರೆಡ್ಡಿ ಜೊತೆ ಹೈದರಾಬಾದ್ಗೆ ತೆರಳುತ್ತಿದ್ದೇನೆ. ಅಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತೇನೆ. ನಾನು ಚನ್ನಾಗಿದ್ದೇನೆ , ಭಯಪಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
ಲವ್ ಯೂ ರಚ್ಚು ಶೂಟಿಂಗ್ ವೇಳೆ ದುರಂತ , ಫೈಟರ್ ಸಾವು : ಮೂವರಿಗೆ ನ್ಯಾಯಾಂಗ ಬಂಧನ
ತಮಿಳು ನಟ ಧನುಶ್ ನಾಯಕನಾಗಿ ನಟಿಸುತ್ತಿರುವ 44ನೇ ಚಿತ್ರದ ಶೂಟಿಂಗ್ ವೇಳೆ ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಪ್ರಕಾಶ್ ರಾಜ್, ಹೈದರಾಬಾದ್ಗೆ ಪ್ರಯಾಣ ಮಾಡಿದ್ದಾರೆ. ಇನ್ನು ತೆಲುಗು ಸಿನಿಮಾ ಕಲಾವಿದರ ಸಂಘದ (‘ಮಾ’) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರಾಜ್ ಸ್ಪರ್ಧೆ ಮಾಡಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಎಲೆಕ್ಷನ್ ನಡೆಯಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ಮತ್ತು ತಂಡ ತಯಾರಿ ನಡೆಸಿದ್ದು, ಸುದ್ದಿಗೋಷ್ಠಿ ಮಾಡಿ ಮಾಹಿತಿ ಹಂಚಿಕೊಂಡಿದ್ದರು.
ರಾಜ್ ಎದುರು ಮಂಚು ವಿಷ್ಣು, ಜೀವಿತಾ ರಾಜಶೇಖರ್ ಹಾಗೂ ಹೇಮಾ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಗಳಾಗಿದ್ದಾರೆ. ಮಣಿರತ್ನಂ ನಿರ್ಮಾಣದಲ್ಲಿ ಮೂಡಿಬಂದಿದ್ದ ನವರಸ ಸಿನಿಮಾದಲ್ಲಿ ಪ್ರಕಾಶ್ ರಾಜ್ ನಟಿಸಿದ್ದರು. ಒಂಬತ್ತು ಕಥೆಗಳನ್ನು ಒಳಗೊಂಡಿದ್ದ ಚಿತ್ರದಲ್ಲಿ ಬಿಜೋಯ್ ನಂಬಿಯಾರ್ ನಿರ್ದೇಶಿಸಿದ್ದ ‘ಎಧಿರಿ’ ಕಥೆಯಲ್ಲಿ ರಾಜ್ ಅಭಿನಯಿಸಿದ್ದರು. ಈ ಚಿತ್ರ ನೆಟ್ಪ್ಲಿಕ್ಸ್ನಲ್ಲಿ ತೆರೆಕಂಡಿತ್ತು. ಮಹೇಶ್ ಬಾಬು ನಿರ್ಮಾಣದ ‘ಮೇಜರ್’,
ಇನ್ನೂ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ. ಮತ್ತೊಂದು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ಅರ್ಜುನ್ ನಟನೆಯ ಪುಷ್ಪ, ರಜನಿಕಾಂತ್ ಅಭಿನಯದ ಅಣ್ಣಾತ್ತೆ ಹೀಗೆ ಇನ್ನೂ ಸಾಲು ಸಾಲು ಬಿಗ್ ಸ್ಟಾರ್ ಗಳ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ರಾಜ್ ಬಣ್ಣ ಹಚ್ಚಿದ್ದಾರೆ.
ಲವ್ ಯೂ ರಚ್ಚು ಶೂಟಿಂಗ್ ವೇಳೆ ದುರಂತ , ಫೈಟರ್ ಸಾವು : ಅಜಯ್ ರಾವ್ ವಿರುದ್ಧ ಬೇಸರ ವ್ಯಕ್ತಪಡಿಸಿದ ಗಾಯಾಳು..!
ಲವ್ ಯೂ ರಚ್ಚು ಶೂಟಿಂಗ್ ವೇಳೆ ದುರಂತ , ಫೈಟರ್ ಸಾವು : ರಚಿತಾ ರಾಮ್ ಸಂತಾಪ








